Submission 2846

ಮಾಡ್ರನ್ ಮನುಷ್ಯ

ರಚನೆ : ಜೀವನ್ ಕುಪ್ಪಾಳ್ ಡಿ

----------------------------------

ದೈವ ಭಕ್ತಿಗೆ ಮುಕ್ತಿ ತೋರಿಸಿ, ಕರುಣೆಯನ್ನ ಕಸವನಾಗಿಸಿ, ಮುಗ್ಧ ಜನರ ರಕ್ತಹೀರೋ, ಸುಳ್ಳ ತುಂಬಿದ ಸತ್ಯ ಸಾರೋ, ಬಾರೋ ಬಾ ರಣ ಮಾನವ. ಭಯದ ಬೀಜವ ಬಿತ್ತಿ ಬಂದು, ದ್ವೇಷ ಸೇಡುಗಳೇ ನಿನ್ನ ಬಂಧು, ಜನರ ಕಣ್ಣಿಗೆ ರಾಮನಂತೆ, ನಿಜವ ನುಡಿದರೆ ಕ್ರೂರಿಯಂತೆ, ಬಾರೋ ಬಾ ರಣ ಮಾನವ. ಕಾಮ ಕ್ರೋಧದ ಉಡುಪ ಧರಿಸಿ, ಲೋಭ ಮೋಹದ ತುತ್ತ ಉಣಿಸಿ, ಮದ ಮತ್ಸರದ ಮಂತ್ರ ಪಠಿಸಿ, ಮೋಸ ಬೆರೆತ ದೇಹ ಧರಿಸಿ, ಬಾರೋ ಬಾ ರಣ ಮಾನವ.

----------------------------------

ನೋಂದಣಿ ಐಡಿ : KPFS2-6902

240
Votes
1,153
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top