Submission 2828

ಉಸಿರ ಹೆಜ್ಜೆಗಳು

ರಚನೆ : ಡಾ. ಮಮತಾ

----------------------------------

ಪಂಚಭೂತದಿ ಮನವ ಬಂಧಿಸಿ, ಜೀವ ದ್ರವಗಳ ಆಯ್ದು ಬೆರೆಸಿ, ಆತ್ಮ ಬೆಸೆದು ಜೀವತಳೆಯಲು, ಮೊಳಕೆಯೊಡೆಯಿತು ತನುವ ಕಾಳು... ಅಮೃತಕ್ಷೀರಘನಾಹಾರ ಸೇವಿಸಿ, ಸಾರ್ವಭೌಮತೆ ಛಾಪು ಮೂಡಿಸಿ, ಗೆಜ್ಜೆ ಕಟ್ಟಿದ ಉಸಿರು ಹೆಜ್ಜೆ ಇಡಲು, ನಿತ್ಯ ಕೌತುಕ ಭರವಸೆಯ ತಿರುವುಗಳು... ಧರ್ಮ ಅರ್ಥ ಕಾಮ ಪೂರೈಸಿ, ಮತ್ತೆ ಪಯಣವು ಮೋಕ್ಷ ಅರಸಿ, ಗರ್ಭದ ಗುಡಿಯಿಂದ ಭೂದೇವಿಯೊಡಲು, ಮಾರ್ಮಿಕವಿದು ಜೀವನ ಪ್ರಯಾಣದ ಮಜಲು.

----------------------------------

ನೋಂದಣಿ ಐಡಿ : KPFS2-6889

3
Votes
128
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top