Submission 2830

ಹೃದಯದ ಪಿಸುಮಾತು

ರಚನೆ : ಶಿವರಂಜಿನಿ ಬಿ

----------------------------------

ಸುಮ್ಮನೆ ಕುಳಿತು, ಆ ದಿನಗಳ ನೆನಪಲಿ ಬೆರೆತು ಬರೆದೆ ಈ ಸಾಲುಗಳ, ಸಾಲದಾಯ್ತು ಭಾವ ವ್ಯಕ್ತಿಗೆ ಪದಗಳ ಎರವಲು ಖುಷಿ ಮೂಡಿ ಮುಖವರಳಿತು, ಹೊಳೆದಾಗ ನೆನಪಾದ ಪದ ಗೀಚಿದಾಗ ಹಾಡಾಯ್ತು, ಜೀವ ಹೋಗಿ ಬಂತು ಹೇಳಲು ಮನದ ಮೂಲೆಯಲಿ ಬರಲಿ ಬಿಡು ಹೊಸತನ, ಭವದ ಬದುಕಲಿ ಕೊನೆಯಿರದ ಏಕಾಂತ ನೀನು, ಬಾಳ ಪಯಣದಿ ಹೇಳದೆ ಉಳಿದಿದೆ ಎಲ್ಲವೂ ನನ್ನಲಿ ಮೌನ ಮಾತಾಗಬೇಕು ಮನದಿ, ಅಂತರಂಗದ ಆತ್ಮರಂಗದಿ ಹೊರಬರಲಿ ನಾ ಬಚ್ಚಿಟ್ಟ ಮಾತೆಲ್ಲವೂ, ನೂರು ಶರಧಿಯ ಅಲೆಯ ಸದ್ದಲಿ

----------------------------------

ನೋಂದಣಿ ಐಡಿ : KPFS2-6890

87
Votes
559
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top