Submission 2480

ಗಡಿಯಲ್ಲಿನ ದೇವರು

ರಚನೆ : ವಿಜಯಲಕ್ಷ್ಮಿ ಜಿ

----------------------------------

ಗಡಿಯನ್ನು ಕಾಯುವ ಯೋಧನಿವ; ಒಳಗಿನ ಭಯವನು ನಂದಿಸಿ, ಭರವಸೆಯ ಬೆಳಕಾದವನಿವ. ಮನೆ ಮನೆಯ ನೆಮ್ಮದಿಯ ನಿಟ್ಟುಸಿರಿವ, ತ್ಯಾಗಕ್ಕೆ ಇನ್ನೊಂದು ಪರಿಚಯವೇ ಇವ. ಕೇಳುವೆವು ಗುಡಿಯಲಿ ನಿಂತು ದೇವರೇ ಕಾಪಾಡು ಎಂದು, ನಮಿಸಬೇಕು ಕಾಣುವ ದೇವರೇ ಇವರು ಎಂದು. ಯೋಚಿಸಲಿಲ್ಲ ದೇಶದಲ್ಲಿ ಬೇರೆ ಜಾತಿಯವರು ಇಹರೆಂದು, ಕಿಡಿಗೇಡಿಗಳ ಸೆಡೆಬಡಿಯಲು ತಾನೆಂದು ಮುಂದು. ಪ್ರಜೆಗಳನ್ನೇ ತನ್ನ ಮಕ್ಕಳೆಂದು ಪೊರೆದ. ಉರಿವ ಬೆಂಕಿಚಂಡು ತಾನಾದರೂ ಹೂಗಳಂತೆ ನಮ್ಮೆಲ್ಲರನ್ನೂ ಕಾಪಾಡಿದ. ನಮ್ಮ ನಾಳಿನ ಬದುಕಿಗೆ ತಾ ದೀಪವಾದ.

----------------------------------

ನೋಂದಣಿ ಐಡಿ : KPFS2-6656

912
Votes
5,541
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top