Submission 2478

ತ್ವರೆಯಬೇಡ

ರಚನೆ : ನವೀನ್ ಆಚಾರ್ಯ

----------------------------------

ತ್ವರೆಯಬೇಡ ಓ ನಸುಕೆ ನೀ, ಏಕೆ ಆತುರ.? ತೆರೆದ ಕಂಗಳಲ್ಲಿ ಅವಳು ಗಾಳಿ ಗೋಪುರ..! ತರುಲತೆಗಳು ಅಪ್ಪಿದಂತೆ, ತಾಯಿ ಮಗುವ ಅವುಚಿದಂತೆ ಮುದುಡಿರುವಳು ಮಡಿಲಿನಲ್ಲಿ ನಗ್ನಭಾವ ಸೂರೆ ಚೆಲ್ಲಿ, ನನ್ನ ಶ್ಯಾಮಲೆ..! ಆತುರದಲಿ ತೆರೆಯಬೇಡ ಕಣ್ಣ ಒಮ್ಮೆಲೆ..! ನನ್ನ ಎದೆಯ ಕೇಶ ಪೊದೆಯ, ಸರಿಸುತಿಹಳು ಉಸಿರ ತೀಡಿ ಪ್ರೇಮಪಾಶ ಬೀಸಿದಂತೆ, ತೋಳ ಬಂಧಿಯಾಗಿ ಬೇಡಿ ಮಲಗಿರುವಳು ಮಗುವಿನಂತೆ ನನ್ನ ಕೋಮಲೆ ತ್ವರೆಯಬೇಡ ನಸುಕೆ ನೀ.. ಈಗ ಒಮ್ಮೆಲೆ..! ಕನಸಿನಲ್ಲಿ ಕಂಡ ಬಿಂಬ, ನಸುಕಿನಲ್ಲಿ ಕದಡಿದಾಗ ಕೊಚ್ಚಿಹೋದ ತೊರೆಯ ನಾನು ಕೂಗಿ ಕರೆಯಲೇ.? ಬಿಟ್ಟುಹೋದ ಗುರುತೇ ಇಲ್ಲ ಎಂದು ಕೊರಗಲೇ.? ತ್ವರೆಯಬೇಡ ನಸುಕೆ ನೀ ಏಕೆ ಆತುರ

----------------------------------

ನೋಂದಣಿ ಐಡಿ : KPFS2-6655

228
Votes
1,166
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top