Submission 2476

ಬಂದು ಹೋಗುವ ಆಟ

ರಚನೆ : ರಾಹುಲ್ ಮಹಾಂತೇಶ

----------------------------------

ಕುಂತಲ್ಲೇ ಕಳೀತು ಕಾಲ, ಹಿಡಿಬೇಕು ಕ್ವಾಣದ ಬಾಲ. ತಡ ಆದ್ರ ಬೈತಾನ ಯಮ, ತಡವೀದ್ರ ಹೊಡೀತಾನ ಬ್ರಹ್ಮ. ಉಸರಿರೂತನಕ ನಾಟಕ, ಎದಿ ನಿಂತಮ್ಯಾಲ ನರಕ. ಲೆಕ್ಕ ಹಾಕತಾನೊ ಚಿತ್ರಗುಪ್ತ, ಪುಣ್ಯ ಮುಚ್ಚಿದ ಪಾಪ ಎಷ್ಟಂತ. ಅಳಕೊಂತ ಭೂಮಿಗೆ ಬಂದ್ವಿ, ನಮ್ಮವ್ರ್ನ ಅಳಸ್ಕೊತ ಹೊರಬಿದ್ವಿ. ಕಣ್ಣೀರ ಹಣಿಸಿ ಬಿತ್ತತಾರೋ ನೆಲದಾಗ, ಇದ್ದಾಗ ಹೆಸರಮಾಡೋ ಕುಲದಾಗ. ಕಾಯ ಕರಗಿ ಆತು ಅಸ್ತಿ, ಅಷ್ಟರಾಗ ಹರದ್ರು ಆಸ್ತಿ. ಕನಸ ಕಟ್ಟಿ ದುಡದು ಇಟ್ಟಿ, ಎಲ್ಲ ಬಿಟ್ಟು ಎದ್ದು ಹೊಂಟಿ. ಇರೂತನಕ ಚಂದ ಬಾಳು, ಭಾಳ ಮೆರದ್ರ ಎಲ್ಲ ಹಾಳು. ಬದುಕ ಒಂದ್ ಮಸಣಯಾನ, ಸುಡುಗಾಡ ಹಾದಿ ಚಾರಣ.

----------------------------------

ನೋಂದಣಿ ಐಡಿ : KPFS2-6653

1
Votes
111
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top