ಕನ್ನಡವೇ ನನ್ನ ಪ್ರಾಣಧಾರೆ
ರಚನೆ : ದೀಪಾ ದೀಪಕ್ ಶೆಣೈ
----------------------------------
ನಮ್ಮ ಕನ್ನಡ—ಹೃದಯದ ನುಡಿ, ನಾಡಿನ ನೆನಪು, ಕುವೆಂಪುವಿನ ಕಾವ್ಯದ ಹೊಳೆ, ದ. ರಾ. ಬೆಂದ್ರೆಯ ಭಾವದ ಬೆಂಕಿ. ಪ್ರತಿ ಪದವು ಮನೆಮೇಲೆ ನುಡಿದ ತಾಯ್ಮನೆಯ ಆಶೀರ್ವಾದ, ಪ್ರತಿ ಸಾಲು ಮನದಾಳದ ದೀಪ,—ಮನದಾಸೆಯ ಮೌನಕ್ಕೂ ಹಾಡು. ಪೀಠದ ಬೆಳಕು ಹೊತ್ತು, ಶಾಲೆಯ ಕೋಣೆಯೊಳಗಿಂದ ಪುನರಾವೃತ್ತಿ, ನಮ್ಮ ಕೈಗಳಲ್ಲಿ ಜವಾಬ್ದಾರಿ, ನುಡಿಯಲ್ಲಿ ಬದುಕಿನ ತಾತ್ಪರ್ಯ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ— ಇದೇ ಮನದಾಳದ ಆಕಾಂಕ್ಷೆ, ಈ ನುಡಿಯೇ ನಮಗೆ ದಾರಿ, ಈ ನುಡಿಯೇ ನಮ್ಮ ಧ್ವನಿ. ಇದೇ ನಮ್ಮ ಜೀವ ನೆಲೆಯ ಗಾನ ಇದೇ ನಿಮ್ಮ ಜೀವ ನೆಲೆಯ ಗಾನ ಇದೇ ನಮ್ಮೆಲ್ಲರ ಜೀವ ನೆಲೆಯ ಸವಿಗಾನ, ನಮ್ಮ ಪ್ರತಿ ಹೃದಯಕ್ಕೊಂದು ಪ್ರಣಯ, ಪ್ರತಿ ಮನಸ್ಸಿಗೆ ಸೇವೆಯ ಹೊಣೆ. ಬಾಗಿಲು ತೆರೆದು ಘೋಷಿಸೋಣ — ನುಡಿ ಸಂರಕ್ಷಣೆ ನಮ್ಮ ಕರ್ತವ್ಯ, ನಮ್ಮ ಕನ್ನಡ, ನಮ್ಮ ಜನನಿ; ನುಡಿದಷ್ಟು ಪ್ರೇಮ, ನುಡಿದಷ್ಟು ಸೌಂದರ್ಯ. ನಮ್ಮ ಕನ್ನಡ — ಜೀವನದ ಪ್ರತಿಜ್ಞೆ; ಪ್ರತಿ ಉಸಿರಿನಿಂದ ಸೇವಿಸುವೆವು, ಜನನಿಗೆ ನುಡಿ, ಹೃದಯಕ್ಕೆ ಬೆಳಕು — ನಿನ್ನ ಪ್ರೇಮವೇ ನಮಗೊಂದು ದಾರಿ ದೀಪ.
----------------------------------
ನೋಂದಣಿ ಐಡಿ : KPFS2-6645