* ಮಗು.....ಮನಸು *
ರಚನೆ : ಡಾ॥ಬಿ.ಎಸ್.ರಮೇಶ
----------------------------------
ನಗು ನಗುತ ಬಾಳನನುಭವಿಸಲು, ಮಗುವಾಗಬೇಕು ಮನಸು— ಹಗೆಯೆಂದರೇನರಿಯದೆ, ಕನಸಿನಲೂ ಸಿಹಿನಗೆಯ, ಬೀರುತ್ತ ಬದುಕಲು. ಮಗುವಾಗ ಬೇಕು ಮನಸು. ಹೇ ದೇವನೆ ಕರುಣಿಸು, ನನಗೂ ಆ ಮನಸು! ನಾನೂ ಬದುಕಲಿಚ್ಚಿಸುವೆ ಮಗುವಿನಂತೆ, ಇಲ್ಲದೆ , ಯಾವುದೇ ? ಇರಿಸು ಮುರಿಸು ಮಗುವಾಗ ಬೇಕು ಮನಸು ಮಗುವಾಗ ಬೇಕು ಮನಸು ಮಗುವಾಗಿ ಜೀವನಾಮೃತವ ಅನುಭವಿಸು.
----------------------------------
ನೋಂದಣಿ ಐಡಿ : KPFS2-6631