Submission 2442

ಒಂದಿಡಿ ಮಾತು

ರಚನೆ : ಭರತ ಜನನಿ

----------------------------------

ಬೇಸರವಾಗಿದೆ ನನ್ನ ಜೊತೆ ನಾನೇ ಸುಮ್ಮನೆ ಕೂತು ಬಿಡುವಾಗಿದ್ದರೆ ಸಿಗಬಹುದೆ ಆಡಲು ಒಂದಿಡಿ ಮಾತು ನಾಚಿಕೆ ಇಲ್ಲದ ಹುಟ್ಟು ಪೋಲಿಯ ಹೃದಯಕೆ ಸೂಚನೆ ನೀಡದೆ ಬರುವುದು ಪ್ರೀತಿಯ ವಾಡಿಕೆ ಖಾಸಗೀತನ ಬೇಕು ಯಾತಕೆ ನೀನೆ ಇರಲು ಖಾಸ ತೋರಿಕೆ ಮಾಡದೆ ನೇರ ಮಾತಿಗೆ ಬಂದರೆ ತುಡಿಯುವ ಭಾವಕೆ ಇರದು ಯಾವುದೇ ತೊಂದರೆ ನಾಡಿ ಹಿಡಿದರೆ ನಿನ್ನ ಹೆಸರನ್ನೇ ಕೇಳಿದಂತೆ ಭಾಸ ಒಲವಿನ ಠೇವಣಿ ಸಿಗದೆ ಸೋತಿಹೆ ಮನ್ನಿಸು ಸಿಕ್ಕರೆ ನಿನ್ನಯ ಬೆಂಬಲ ನಿಲ್ಲುವೆ ಗೆಲ್ಲಿಸು ಎಲ್ಲಾ ಸುತ್ತಿನ ಕನಸಿನಲ್ಲಿಯು ನೀನೆ ಕಾಣಬೇಕು ಹಂಚಿಕೆಯಾಗದ ನನ್ನ ಹರೆಯವು ನಿನ್ನದೇ ಹೊಂದಿಕೆ ಆಗಲಿ ನಿನ್ನ ಉಸಿರಿಗೆ ನನ್ನೆದೆ ನನ್ನ ಪ್ರೀತಿಯ ಎಣಿಕೆಯಾದರೂ ನೀನೆ ಮಾಡಬೇಕು

----------------------------------

ನೋಂದಣಿ ಐಡಿ : KPFS2-6626

1
Votes
97
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top