ಅಬಲೆಯ ಆರ್ತನಾದ
ರಚನೆ : ಶ್ರೀ ವಿದ್ಯಾ.ಎಸ್
----------------------------------
ಕತ್ತಲನ್ನು ವರ್ಣಿಸಲು ನನಗೆ ತಿಳಿದಿದೆ, ತಿಳಿಸಿಕೊಟ್ಟವನು ನೀನೆ.. ಪ್ರೀತಿಯೆಂಬ ಹಣತೆಯಲ್ಲಿ, ಮೋಸದ ಬೆಳಕು ತುಂಬಿಸಿದೆ.. ಹೃದಯಕ್ಕೆ ರೆಕ್ಕೆ ಹಚ್ಚಿ, ನಿನ್ನ ಮನಸ್ಸೆಂಬ ಆಗಸಕ್ಕೆ ತೆರೆ ಎಳೆದುಕೊಂಡೆ.. ಸರಿಸುವ ಕಾರಣದಿ ನಾ ಮುನ್ನಡೆದೆ, ಭ್ರಮೆಯ ಲೋಕಕ್ಕೆ ನೀ ಆಮಂತ್ರಿಸಿದೆ.. ಇನ್ನೇನ ಹೇಳಲಿ ನಾ ಮುಂದೆ, ಬುದ್ಧಿಯನ್ನು ವಾಸ್ತವದಲ್ಲಿಯೇ ನಾ ಮರೆತಿದ್ದೆ.. ನಶಿಸುವ ದೀಪದಂತೆ ಧಗಧಗನೇ ನಾ ಉರಿದೆ.. ಕಣ್ಣೀರು ಕಾಡ್ಗಿಚ್ಚಾಗಲು ನ್ಯಾಯ ದೇವತೆಯ ಕಣ್ಣಪಟ್ಟಿ ಕಂಡೆ!
----------------------------------
ನೋಂದಣಿ ಐಡಿ : KPFS2-6505