ಕನ್ನಡ ತಾಯಿ – ಕಾವ್ಯದ ಗಾಯಿ
ರಚನೆ : ವೀರಶೆಟ್ಟಿ
----------------------------------
ಕಾವ್ಯದ ತಾಯಿಯೆ, ನಿನ್ನ ನಾದ ಅಮೃತದ ಹೊಳೆ, ಭಾವದ ಮಣಿಯಲಿ ಬೆಳಗುವ ನಿನ್ನ ಪ್ರೀತಿ ಬೆಳಕೆ। ಗಂಗಾ ತೀರದ ತೇಜದ ಕಿರಣ ನೀನೆ, ಭಾರತದ ಹೃದಯದ ಮಣಿಯ ಅಲಂಕಾರ ನೀನೆ। ನಿನ್ನ ಪಾದದ ಧೂಳಲಿ ಹುಟ್ಟಿದ ಕವನಗಾನ, ನಿನ್ನ ನುಡಿಯಲಿ ಜೀವದ ಹೊಸ ಪುನರ್ಜನ್ಮ ಪ್ರಣಯ। ವೀರರ ಬೆವರಲಿ ಅರಳಿದ ನಿನ್ನ ಪರಿಮಳ, ಹೋರಾಟದ ಹೊಗೆಯಲಿ ಚಿಗುರಿದ ನಿನ್ನ ನಗು ಕಿರಣ। ಜ್ಞಾನವಿಜ್ಞಾನದ ಕಿರೀಟವ ನೀ ಧರಿಸಿದಿ, ಸಂಸ್ಕೃತಿಯ ಸಿಂಹಾಸನದ ರತ್ನವ ನೀ ಇಂದಿಗೂ। ಅನ್ನದ ಮಮತೆ, ಮನುಜ ಪ್ರೀತಿಯ ನಿನಗೆ, ಮಾತಿನ ಮಾಧುರ್ಯದಲ್ಲಿ ಮೂಡಿದೆ ನಿತ್ಯದ ಗೀತೆ। ಓ ಕನ್ನಡ ತಾಯಿ, ಕಾವ್ಯದ ಗಾಯಿ ನಿನ್ನ ಸ್ತುತಿ, ನಿನ್ನ ಆಶೀರ್ವಾದವೇ ನಿತ್ಯದ ಜೀವಸ್ಮೃತಿ।
----------------------------------
ನೋಂದಣಿ ಐಡಿ : KPFS2-6477