ನೀನೇ ಒಂದು ಸುಂದರ ಕಾರಣ
ರಚನೆ : ರಶ್ಮಿ ಎನ್
----------------------------------
ಕನಸು ನನಸಿನ ರೇಖೆ ಮೀರಿದ ಕಲ್ಪನೆಯ ಕಥಾ ನಾಯಕನು ನೀನು, ನಿನ್ನ ಬೆನ್ನ ಹಿಂದೆ ಬದುಕುವ ಬಯಕೆಯ ಹೊತ್ತವಳು ನಾನು. ಸಾವಿಗೂ ಜೀವಿಸುವ ಭಾವನೆ ಹುಟ್ಟಿಸುವ ನಗು ನಿನ್ನದು, ನಿನ್ನ ನಗುವಿಗೆ ಕಾರಣಳಾಗುವ ಆಸೆ ನನ್ನದು. ಇಡೀ ಲೋಕಗೆಲ್ಲುವ ಛಲವ ಕಣ್ಣಲಿ ತುಂಬಿರುವ ನೀನು, ನನ್ನ ಲೋಕವೇ ಆದ ನಿನ್ನ ಗೆಲ್ಲುವ ತವಕದಲಿ ನಾನು. ನೀ ಬಂದ ನಂತರ ಈ ಜೀವನ ನನ್ನ ಪುಣ್ಯವೇ ಆಗಿದೆ, ಪ್ರೀತಿಗೆ ಹೃದಯ ಭಾರವೇ ಆಗಿದೆ. ನನ್ನ ಮೆಚ್ಚಿದ, ಪ್ರೀತಿಯ ಹುಚ್ಚು ಹಿಡಿಸಿದ, ನೀನೇ ಒಂದು ಸುಂದರ ಕಾರಣ!
----------------------------------
ನೋಂದಣಿ ಐಡಿ : KPFS2-6476