Submission 2244

ಕರುನಾಡ ಗತವೈಭವ

ರಚನೆ : ದಿವಿತ್

----------------------------------

ಯಾವ ಕಲೆಗಾರನ ಶಿಲ್ಪಕಲೆಯ ಕೈಚಳಕೊ ಅರಿಯೆ ನಾ ಮಲೆನಾಡ ಸೌಂದರ್ಯಕೆ ಮೈ ಮರೆತ ನಾ ರಸದೌತಣವಿಟ್ಟ ರಸಕವಿಗಳ ನಾಡೆನ್ನಲೆ ನಾ ಹೊಯ್ಸಳರ ಶಿಲ್ಪ ಕಲೆಗೆ ಮನ ಸೋತೆ ನಾ ವರ್ಣನೆಗು ಸಿಗದ, ವರ್ಣಿಸಲಾಗದ ವರ್ಣಮಾಲೆಯನ್ನ ಒಟ್ಟುಗೂಡಿಸಿ ವರ್ಣಿಸಲೊರಟೆ ಒತ್ತಕ್ಷರದಲ್ಲಿರೊ ಒಲವನ್ನ ಕನಸಲ್ಲು ಕನವರಿಸುವಂತ ಕವಿ ಕಾವ್ಯಕಲ್ಪನೆಯನ್ನ ಕಂಗೊಳಿಸುವಂತ ನಮ್ಮ ಮೈಸೂರು ದಸರಾವನ್ನ ಕರುನಾಡ ಸಾಮ್ರಾಜ್ಯವ ಚಿತ್ರಿಸಲು ಕುಳಿತೆ ನಾ ಚಿತ್ರ ಪಟವು ಹೊಳೆಯುವುದು ಸುವರ್ಣ ನಗರಿಯ ಹೊಳಪಂತದು! ಎಷ್ಟೇಳಿದರು ಸಾಲದು ಮರುಜನ್ಮವು ಈ ನಾಡಲ್ಲೆ ಬೇಕೆನ್ನಿಸುವುದು!

----------------------------------

ನೋಂದಣಿ ಐಡಿ : KPFS2-6475

74
Votes
433
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top