ಮೌನ ತಂದ ಆಸ್ತಿ
ರಚನೆ : ಸಚಿನ ಶೆಟ್ಟಿ
----------------------------------
ಒ ನನ್ನ ಕನ್ನಡ ತಾಯೆ ನೀನೇಕೆ ಮೌನಿ, ಹಾ.. ಹೌದು ನಾವೆಲ್ಲ ನಿನ್ನಂತೆಯೇ! ಕಂಡರು ಕಾಣದಂತೆ, ಎಲ್ಲಿಯು ನಿಲ್ಲದೆ ಓಡುತ್ತಿರುವವರು! ನೆಮ್ಮದಿಯ ಕಡೆಗಣಿಸಿ, ಸುಜ್ಞಾನ ಮರೆತು, ಜ್ಞಾನವ ಅರೆಸುತಿರುವವರು! ಹಾ.. ಹೌದು ನಾವೆಲ್ಲ ನಿನ್ನಂತೆಯೇ! ಅಂದು ಇಲ್ಲದ ಭೀತಿ, ಇಂದೇಕೋ ಆವರಿಸಿದೆ, ಸ್ವಪ್ನಗಳೆಲ್ಲಾ ಖಾಲಿ ಆದಂತಿದೆ! ಬೆಳಕಿನ ಗೋಡೆಯ ಮೇಲೆ ಕತ್ತಲೆಯ ನೆರಳು, ಹಸಿದ ಹುಲಿ ಬಾಯಿ ತೆರೆದಂತಿದೆ! ಹಾ.. ಹೌದು ನಾವೆಲ್ಲ ನಿನ್ನಂತೆಯೇ! ಸಂದೇಶವೇ ಸಂದೇಹ ತರುತಿದೆ, ಮೊದಲಿದ್ದ ನಂಬಿಕೆಗಳಿಲ್ಲ! ವಿಶೇಷ ಅನಿಸಿದರೂ, ಮೊದಲಿದ್ದ ಆನಂದವಿಲ್ಲ! ಹಾ.. ಹೌದು ನಾವೆಲ್ಲ ನಿನ್ನಂತೆಯೇ, ನಾವೆಂದು ನಿನ್ನಂತೆಯೇ ಸದಾ ಮೌನಿ!
----------------------------------
ನೋಂದಣಿ ಐಡಿ : KPFS2-6388