ಕಸ್ತೂರಿ ಕನ್ನಡ
ರಚನೆ : ಚಿಕ್ಕಪ್ಪನಹಳ್ಳಿ ಸೋಮು
----------------------------------
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಮೇಲೆ, ಕನ್ನಡದ ಹಿರಿಮೆ ಹೆಚ್ಚಿಸಬೇಕು. ಕರುನಾಡಲ್ಲಿ ಬದುಕುವ ಅವಕಾಶ ಸಿಕ್ಕಿದ ಮೇಲೆ, ಕನ್ನಡ ಉಚ್ಚರಿಸುವ ಮೂಲಕ ಕನ್ನಡವನ್ನು ಗೌರವಿಸಬೇಕು! ನವೆಂಬರ್ ೧ ಕನ್ನಡಿಗರಾಗ ಬದಲು, ವರ್ಷ ಪೂರ್ತಿ ಕನ್ನಡ ಬೆಳಗಿಸುವಂತರಾಗಬೇಕು. ಈ ಬದುಕೇ ಹಾಗೇ, ಒಂಥರಾ ಅದಲು-ಬದಲು, ಅವನ್ನೆಲ್ಲಾ ಬದಿಗಿಟ್ಟು ಕನ್ನಡ ಪದಗಳ ಗಾನ ಕೇಳಬೇಕು! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯ ಹೇಳುವ ಬದಲು, ಕನ್ನಡ ಬರದವರಿಗೆ ಕನ್ನಡ ಕಲಿಸುವ ಹಠ ನಮ್ಮಲ್ಲಿ ಬೆಳಿಬೇಕು. ನಮ್ಮ ನಾಡು ಕಲೆ, ಸಾಹಿತ್ಯ, ಭಾಷೆ,ಸಂಸ್ಕೃತಿಯ ತವರೂರಾದ ಮೇಲೂ, ದೇಶಾದ್ಯಂತ ಕನ್ನಡದ ಕಂಪು ಹರಡಿಸಬೇಕು!
----------------------------------
ನೋಂದಣಿ ಐಡಿ : KPFS2-6389