Submission 2014

ಪ್ರೀತಿಯೆಂದರೆ

ರಚನೆ : ಭವ್ಯ ಅಶೋಕ್ ಸಂಪಗರ್

----------------------------------

ಪ್ರೀತಿಯೆಂದರೆ ಖಾಲಿ ಕೆಫೆಯಲ್ಲಿ ಕಾಫಿ ಚಪ್ಪರಿಸಿದ್ದಲ್ಲ ಕಣ್ಮನ ಕಲೆತು ಮಾಡುವ ಆತ್ಮಾವಲೋಕನ ಪ್ರೀತಿಯೆಂದರೆ ಬೀದಿ ಬದಿಯಲ್ಲಿ ಕೈಹಿಡಿದು ತಿರುಗಿದ್ದಲ್ಲ ದೇವನೊಲಿದು ಬರುವ ಅನುಸಂಧಾನ ಪ್ರೀತಿಯೆಂದರೆ ಬಿಸಿಯುಸಿರು ತಾಗಿ ಬೆಚ್ಚಗಾಗುವುದಲ್ಲ ಭವಭವದಿ ಬೆಳಗುವ ಆಶ್ವಾಸನೆ ಪ್ರೀತಿಯೆಂದರೆ ಬಲವಂತದ ಒಪ್ಪಂದವಲ್ಲ ಬಿಟ್ಟುಕೊಡುವ ಪರಮ ಸಹನೆ ಪ್ರೀತಿಯೆಂದರೆ ಹಗಲುಗನಸು ಕಾಣುವುದಲ್ಲ ನಿರಂತರ ಕಟ್ಟುವ ಕುಶಲತೆ ಪ್ರೀತಿಯೆಂದರೆ ಲೋಪ ದೋಷ ಹುಡುಕುವುದಲ್ಲ ಇದ್ದಂತೆ ಒಪ್ಪುವ ಉದಾರತೆ ಪ್ರೀತಿಯೆಂದರೆ ತನ್ಮಯತೆ ನಾನು ಮರೆತು ನಿನ್ನ ಅರಿತು ಜೊತೆಗೆ ಬೆರೆತು ಬರೆವ ಕವಿತೆ

----------------------------------

ನೋಂದಣಿ ಐಡಿ : KPFS2-6328

2
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top