Submission 1960

ನನ್ನೊಲವ ನಲ್ಮೆಯ ಕಾವ್ಯ

ರಚನೆ : ಪುರುಷೋತ್ತಮ್ ಪಿ ಎಂ

----------------------------------

ಯಾವ ಹೆಣ್ಣು ಅಂದವಿಲ್ಲ ನಿನ್ನ ನೋಡಿದ ಮೇಲೆ ಗೆಳತಿ, ನಿನ್ನ ಪ್ರತಿ ರೂಪವಾಗಿ ನಾ ಬದುಕುವೆನು ಗೆಳತಿ ಬದುಕುವೆನು ನಿನ್ನ ಕಣ್ಣ ಭಾಷೆಯ ಮೀರಿ ಯಾವ ಭಾಷೆಯು ಸೊಗಸೇ ಇಲ್ಲ, ನಿನ್ನ ಕಣ್ ಸನ್ನೆಯಲೇ ನಾ ಬದುಕುವೆನು ಗೆಳತಿ ಬದುಕುವೆನು ನಿನ್ನ ಪರಿಮಳ ಸೋಕಿ ನನಗೆ ಬೇರೆ ಗಂಧಗಳ ಅರಿವೇ ಇಲ್ಲ, ನಿನ್ನ ಉಸಿರಂತೆ ನಾ ಬದುಕುವೆನು ಗೆಳತಿ ಬದುಕುವೆನು ನಿನ್ನ ಬಿಂಬ ಕಂಡ ಮೇಲೆ ಬೇರೆ ಕನಸುಗಳು ಬಂದೇ ಇಲ್ಲ, ನಿನ್ನ ಕನಸೇ ನನಸು ಮಾಡಿ ಬದುಕುವೆನು ಗೆಳತಿ ಬದುಕುವೆನು ನಿನ್ನ ಪರಿಚಯವಾದ ಮೇಲೆ ನಾನೇ ಅಪರಿಚಿತನಾದೆ ಜಗಕೆ, ನಿನ್ನ ಪರಿಚಯದ ನೆನಪಿನ ನೆಪದಲೆ ನಾ ಬದುಕುವೆನು

----------------------------------

ನೋಂದಣಿ ಐಡಿ : KPFS2-6295

20
Votes
270
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top