Submission 1892

ಹೆಣ್ಣು

ರಚನೆ : ಭೀಮಾಶಂಕರ ಚಾವೂರ

----------------------------------

ಹೆಣ್ಣು ನೀ ಅಲ್ಲ ಬರಿ ಹೆಣ್ಣು ನೀನಿದ್ದರೆ ದಿನಾ ತೆರೆಯುವುದು ಜಗ ಕಣ್ಣು ಹೆಣ್ಣು ಹುಟ್ಟಿದರೆ ಅನಬೇಡಿ ನೀವು ಹುಣ್ಣು ಹೆಣ್ಣಿಂದ ತಾನೆ ಬಂದಿರುವನು ಮುಕ್ಕಣ್ಣ|ಹೆಣ್ಣು| ಹೆತ್ತವಳು ಕೂಡಾ ಒಂದು ಹೆಣ್ಣು ಅವಳಿಲ್ಲದಿದ್ದರೆ ನಿನ್ನ ಬಾಯಿಗೆ ಮಣ್ಣು ತಾಯಿ ಪ್ರತಿರೂಪ ಅಕ್ಕಾ ತಾನೆ ಹೆಣ್ಣು ಮಡದಿಯಾಗಿ ಮತ್ತೆ ಬರುವಳು ಹೆಣ್ಣು|ಹೆಣ್ಣು| ಜಗವೆಲ್ಲಾ ಬೆಳಗಿರುವುದು ಈ ಹೆಣ್ಣಿಂದ ಕಣ್ಣು ತೆರೆದು ನೋಡೊಮ್ಮೆ ಅವಳಂದ ಹೆಣ್ಣೆ ನೀನಿದ್ದರೆ ನಮ್ಮ ಬಾಳು ಸ್ವಚ್ಛಂದ ಏನಾದರೂ ತಪ್ಪಾದರೆ ಕ್ಷಮಿಸು ನಮ್ಮಿಂದ|ಹೆಣ್ಣು| ಕರಮುಗಿದು ಬೇಡುವೇ ನಿಮಗೆಲ್ಲಾ ಜರಿದು ನುಡಿಯದಿರಿ ಹೆಣ್ಣು ಮಕ್ಕಳಿಗೆಲ್ಲಾ ಅವಳಿಲ್ಲದೆ ನಮಗೆ ಗತಿಯಿಲ್ಲಾ ತಿಳಿದು ನೋಡಿದರೆ ಯಾರು ಮೇಲಿಲ್ಲಾ|ಹೆಣ್ಣು|

----------------------------------

ನೋಂದಣಿ ಐಡಿ : KPFS2-6265

1,621
Votes
5,478
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top