Submission 1894

ಆಡಳಿತ ಅನೀತಿ

ರಚನೆ : ಸಂಜೀವ್

----------------------------------

ಸರ್ಕಾರಿ ಅನುದಾನ ಗುಳುಂ ಸ್ವಾಹ ಗುದ್ದಲಿ ಪೂಜೆಯಲ್ಲಿ ಮಾತ್ರ ಪೂರೈಕೆಯ ಮೋಹ. ಏನಿದು ತಂತ್ರ ಕುತಂತ್ರ ನೀಚ ರಾಜಕಾರಣ ಆರಂಭಿಕ ಹಂತದಲ್ಲಿ ತಗ್ಗಿಸಿ ಎಲೆಕ್ಷನ್ ಅಂತಿಮ ಕ್ಷಣಗಳಲ್ಲಿ ವೃದ್ಧಿಸಿ ನಡೆಸುವರು ಪ್ರಗತಿಯ ಅವರೋಹಣ ಇದುವೇ ನಮ್ಮ ಶಾಸಕರ ಹೆಮ್ಮೆಯ ಆಡಳಿತದ ನೀತಿ ಚಿಕ್ಕ ಪುಟ್ಟ ಕೆಲಸ ಕಾರ್ಯಗಳ ಪಬ್ಲಿಸಿಟಿ ಒಲವಿನಡೆ ಅವರಿಗೆ ಅಚ್ಚುಮೆಚ್ಚಿನ ಪ್ರೀತಿ. ಭರವಸೆಗಳು ಕಳೆದು ಹೋದವು ನೆನ್ನೆ ಮೊನ್ನೆಗೆ ಕೆಲಸಗಳು ಮಾತ್ರ ಬಾಕಿ ಉಳಿದವು ಇಂದಿಗೂ ಸೊನ್ನೆಗೆ. ಏಳಿ ಎದ್ದೇಳಿ ಅಂಕು ಡೊಂಕಿನ ವಿಚಾರವಂತ ಪ್ರಚಾರಕರೇ ಪ್ರಜಾಕೀಯ ರಾಜಕಾರಣದಲ್ಲಿ ಇವರ ಕಾರ್ಯವೈಖರಿಗೆ ನೀವೇ ಅವರಿಗೆ ನೈಜ ಬಕೆಟ್ ಹಿಂಬಾಲಕರೇ? ತುಳಿದು ಆಳುವ ಅವರ ನೀತಿಯಲ್ಲಿ ಏನು ದೊರಕಿತು ನಿಮಗೆ ಗುಲಾಮಗಿರಿಯ ಸ್ವಾರ್ಥದಲ್ಲಿ ಒಗ್ಗಟ್ಟು ಒಡೆದು ಬೆಳೆದರು ಆಳುತಲಿ ಕೊನೆಗೆ.... ಇದುವೇ ಪ್ರಬುದ್ಧ ಪ್ರಜಾ ಪ್ರಭುತ್ವದ ಪ್ರಕಾಶ ಕನಸಿನಲ್ಲಸ್ತೆ ಕೈಗೂಡುವುದು ಆಶ್ವಾಸಿಸುವ ಪ್ರಗತಿಯ ವಿಕಾಸ.

----------------------------------

ನೋಂದಣಿ ಐಡಿ : KPFS2-6266

3
Votes
127
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top