ಕಳೆಬರಹದ ಕೋರಿಕೆ
ರಚನೆ : ರೆಡ್ಡಿ ಬಡಿಗೇರ್
----------------------------------
ಹಳೆಯ ಕಳೆಬರಹವೊಂದು,ಕಾಯುತಿದೆ ಮಳೆಗಾಗಿ ಹನಿಯಾಗಿ ಬಂದು ,ಬೀಳಬಾರದೇ ಬಿಂದು ಜೀವಕಳೆ ಪಡೆಯುವ ಕಾತುರ ಮತ್ತೇ ಜನ್ಮಿಸುವ ಆತುರ ಕೊನೆಯಿಲ್ಲದ ಕೋರಿಕೆ ನಿರಂತರ !!! ನಿಜವಾಗುವುದೇ ಕನಸು,ಮತ್ತೇ ಸಿಗುವುದೇ ಮನಸು ಮಳೆಹನಿಯು ನೀನು, ಕಳೆಬರಹ ನಾನು. ತೂಗುತೊಟ್ಟಿಲ ಮಗುವಾಗಲೇ, ನಿನಗಾಗಿ ಅತ್ತುಕರೆಯಲೇ ಮಮತೆಯ ಮಡಿಲಿಲ್ಲದೇ, ಆಡಿಸುವರು ಯಾರಿಲ್ಲದೆ ಕಣ್ಣು ಬಿಡುತ್ತಿರುವೆ ತೊಟ್ಟಿಲಲಿ ತೂಗಾಡದೆ ನಿಂತ ಪೆಟ್ಟಿಗೆಯಲಿ ಕೂಗುಧ್ವನಿ ಬಿದ್ದಿಲ್ಲವೇ ? ಕಿವಿಯಲಿ !!! ಬರಬಾರದೇ ಬಳಿಯಲಿ,ಮುದ್ದಿಸಬಾರದೇ ಮಡಿಲಲಿ ನೀ ತಾಯಿಯಾದರೆ,ನಾ ಮಗುವಾಗುವೆ.
----------------------------------
ನೋಂದಣಿ ಐಡಿ : KPFS2-6264