Submission 1888

ಅಮ್ಮನ ಮಡಿಲು

ರಚನೆ : ಆಕಾಶ ಲಕ್ಕುಂಡಿ

----------------------------------

ಗರ್ಭದಲ್ಲಿದ್ದಾಗಲೆ ಘರ್ಜಿಸಿದೆ, ಘರ್ಜಿಸಿದರು ನೀ ಗೌರವಿಸಿದೆ. ಮಮತೆಯ ಪ್ರೀತಿಯ ಬಿತ್ತಿಸಿದೆ, ಹಸಿದಾಗ ಹಾಲುಣಿಸಿ ಹಾರೈಸಿದೆ. ಹೇಗೆ ತೀರಿಸಲಿ ಆ ನಿನ್ನ ಋಣ ಋತುಗಳು ಕಳೆದರು ಮುಗಿಯದ ಕ್ಷಣ. ಹಸಿವಿಗೂ ಮೊದಲೇ ಅನ್ನವನಿತ್ತೆ, ನೀತಿ ಪಾಠವ ಹೇಳುತಲಿದ್ದೆ. ನನ್ನೊಟ್ಟಿಗೆ ನೀ ಮಲಗುತಿದ್ದೆ, ಮಾಡಿದ ತಪ್ಪಿಗೆ ಶಿಕ್ಷೆಯನಿತ್ತೆ, ಶಿಕ್ಷಣ ನೀಡಿ ಶಿಕ್ಷಕಿಯಾದೆ. ನಿನ್ನ ಆಸೆಯ ಬದಿಗಿಟ್ಟು, ನನ್ನ ಆಸೆಗೆ ಭರವಸೆಯಾದೆ. ಹೇಗೆ ತೀರಿಸಲಿ ಆ ನಿನ್ನ ಋಣ ಋತುಗಳು ಕಳೆದರು ಮುಗಿಯದ ಕ್ಷಣ.

----------------------------------

ನೋಂದಣಿ ಐಡಿ : KPFS2-6263

3
Votes
131
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top