ಮನದ ಪ್ರಶ್ನೆ
ರಚನೆ : ಹಫೀಝ್ ಅಸೈಗೋಳಿ
----------------------------------
ರಣ ಬಿಸಿಲ ಬೇಗೆಯಲಿ ಕಿರಾಣಿಯ ಸಲಹುವ ರೈತನ ಕಣ್ಣಲೇಕೆ ನೀರು? ಜಗದ ಬೆನ್ನೆಲುಬನಾದ ರೈತ ರೌದ್ರತೆಯ ಕಾರಿರುಳಲ್ಲಿ ಮಿಂದು ಸುಟ್ಟು ಹೋದನಂತೆ ಸಂತಸದಿ ತಿಂಗಳಬೆಳಕಿನಂತಿದ್ದ ತಿಂಗಳೆರಡು ತುಂಬಿದ ಗರ್ಭಿಣಿಯ ಮೊಗವೇಕಿಂದು ನಿಸ್ತೆಜವು? ಧರ್ಮಗಳೆಂಬ ಪಡುಪಾಟಿನಲಿ ತಾನು ಹೊತ್ತ ಕರಳಕುಡಿಗೆ ತಂದೆ ನಾಮ ಶವವಾಗಿ ಮಾರ್ಪಟ್ಟಿದೆಯಂತೆ ದೂರದ ನಟ್ಟಡವಿ ಕೊಂಬೆಯಲಿ ಇಂಚರದಿ ಹಾಡುತಿದ್ದ ಬಾನಾಡಿಗಳೆಕೀಗ ನೀರವ ಉಸಿರ ಕೊಟ್ಟ ಬೇರುಗಳ ಉಸಿರೇ ಇಲ್ಲದಂತೆ ಮಾಡಿ ಹೆಸರನು ಗಳಿಸಿದರಂತೆ
----------------------------------
ನೋಂದಣಿ ಐಡಿ : KPFS2-6205