ಭಯವೊಂದು ಕಾಡಿದೆ
ರಚನೆ : ಸಹನಾ
----------------------------------
ಭಯವೊಂದು ಕಾಡಿದೆ, ಮದುವೆಯೆಂಬ ಬಂಧನದಿ ಜೀವನ ಪೂರ್ತಿ ಖೈದಿಯಾಗುವ ಭಯ, ಮೂರು ಗಂಟಿನ ನಂಟಲ್ಲಿ, ನನ್ನತನವ ತೊರೆದು ಒಂಟಿಯಾಗುವ ಭಯ, ಯಾರದೋ ಮನದ ದಾಸಿಯಾಗಲು ಹೋಗಿ, ಮನೆಯ ದಾಸಿ ಆಗುವ ಭಯ. ಇನ್ನೊಬ್ಬರ ಮನೆಯ ಬೆಳಕಾಗಲು ಹೋಗಿ, ಕಗ್ಗತ್ತಲ ಬದುಕಲಿ ನಾನೇ ಸಿಲುಕಿ ನಲುಗುವ ಭಯ. ಇನ್ನೊಬ್ಬರ ಸಂಗಾತಿಯಾಗಿ, ಮನೆ ಮಗಳಾಗಿ ಬದುಕುವ ಬರದಲ್ಲಿ, ಸಂಸಾರವೆಂಬ ಸಮುದ್ರದಲ್ಲಿ ಮುಳುಗಿ ಹೋಗುವ ಭಯ. ನನ್ನ ಅಸ್ತಿತ್ವವ ರೂಪಿಸಲು ಹೋಗಿ, ಹುಟ್ಟ ಮನೆಗೂ ಹೋದ ಮನೆಗೂ ಅತಿಥಿಯಾಗೆ ಉಳಿಯುವ ಭಯ. ಮತ್ತೆ ನನ್ನೇ ನಾ ಭೇಟಿಯಾಗಲು ಪರಿತಪಿಸಿ ತವಕಿಸುವ ಭಯ, ಎಂದಿಗೆ ಮಾಯುವುದು ನನ್ನ ಹೃದಯಕ್ಕಂಟಿದ ಮದುವೆಯೆಂಬ ಭಯದ ಗಾಯ?!
----------------------------------
ನೋಂದಣಿ ಐಡಿ : KPFS2-6179