Submission 1709

ಚಿರದೀಪ್ತಿಯ ಕನ್ನಡದ ಕಂಪು

ರಚನೆ : ಪ್ರಿಯಾ ಶಿವಕುಮಾರ್ (ಚಿರದೀಪ್ತಿ)

----------------------------------

ಕನ್ನಡವೆಂದರೆ ಉರಿಯುವ ನವಚೈತನ್ಯ ದೀಪದ 'ಅಭಿಲಾಷೆ ಅದರೊಳಗಿನ ಪ್ರೀತಿಯ ಮೊದಲ ಉಸಿರೇ ನಮ್ಮ ಮಾತೃಭಾಷೆ ಹೃದಯ,ದೇವರು,ಕನಸುಗಳೇ ಇಲ್ಲಿ 'ನಂಬಿಕೆಯ ದೀಪ' ವಿಶ್ವ,ಪ್ರೀತಿ,ಜೀವನವೇ ಇಲ್ಲಿ ನಿರಾಳತೆಯ ಮತ್ತೊಂದು ರೂಪ ಎಲ್ಲಾ ಭಾಷೆಗಳಿಗೂ ಅರ್ಥ ಕಲಿಸುವ ಕನ್ನಡ ಪದವೇ ಇಲ್ಲಿ 'ಪ್ರೀತಿ' ಮೊದಲು ಮಾನವೀಯತೆ ಮೊದಲೆನ್ನುವುದೇ ನಮ್ಮ ನೀತಿ ಭಾವನೆಗಳಿಗೆ ರೆಕ್ಕೆ ನೀಡುವ ಕನ್ನಡದ ನಾದವೆ 'ಕಾವ್ಯ' ಆತ್ಮಕ್ಕಂಟಿದ,ಕನ್ನಡ ಭಾಷೆಯನ್ನರಿತ ಕನ್ನಡಿಗನ ಬದುಕೇ ಭವ್ಯ ಶಬ್ದವಿಲ್ಲದ ಪ್ರಾರ್ಥನೆಯ ನಿಜವಾದ ಭಾವನೆಯೇ ಇಲ್ಲಿ 'ಮೌನ' ಮನದಲೆಯ ಮಧ್ಯೆ ಆತ್ಮದ ನಿಜವಾದ ನಿಶಬ್ದ ತೀರವೇ ಧ್ಯಾನ ಕಾಲಗಳು ಸವೆದರು ಜೀವಂತವಾಗಿರುವ ನಮ್ಮ 'ಸಂಸ್ಕೃತಿ' ದೇವರ ನಿಸ್ಸೀಮ ಕಲೆಯಿಂದ ಜೀವ ಪಡೆಡದಿರೋ ನಮ್ಮ ಪ್ರಕೃತಿ ಕನ್ನಡ ಭಾಷೆಯಲ್ಲಿರುವ ತೂಕ ಮತ್ತು ಗೌರವವೇ ನಮ್ಮ 'ಹಿರಿಮೆ ಪ್ರತಿ ಶಬ್ದದಲ್ಲಿರುವ ಮೌಲ್ಯ ಮತ್ತು ಸತ್ಯತೆಯೇ ನಮ್ಮ ಗರಿಮೆ'

----------------------------------

ನೋಂದಣಿ ಐಡಿ : KPFS2-6172

169
Votes
942
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top