ಕಾನನ ಕದನ
ರಚನೆ : ಆತ್ಮೀಯ ಸುಧಾಕರ
----------------------------------
ಅಳಿದಿದೆ ಕಾಡು, ನಿಂತಿದೆ ನಾಡಿನ ಗರ್ವ, ಹಸಿರು ಸತ್ತು, ಕಾಂಕ್ರೀಟಿನ ರೋದನ ಸರ್ವ. ವನ್ಯಜೀವಿಗಳ ಬದುಕು ಆಗಿದೆ ಈಗ ಪರದೇಶ, ಮನುಜನ ಆಸೆಗೆ ಬೇಕಿದೆ ಇನ್ನಷ್ಟು ಪ್ರದೇಶ. ಅವುಗಳ ದಾರಿಗಳೆಲ್ಲಾ ಈಗ ನಮಗೆ ಊರು, ಬಿಕ್ಕಟ್ಟಿನ ಮೂಲ ತಿಳಿದರೂ, ನಾವೇಕೆ ಮರುಳು? ಕಳೆದುಕೊಂಡ ನೆಲೆಯ ಹುಡುಕಿ ಅದು ನಾಡಿಗೆ ಬಂದರೆ, ಭಯ-ಕೋಪಗಳ ನಡುವೆ ಜಗಳ ಶುರು ಆದರೆ. ಪೈರು ಹಾಳಾದರೆ ರೈತನ ಕಣ್ಣಲ್ಲಿ ನೀರು, ಪ್ರಾಣ ಕಳೆದುಕೊಂಡರೆ ಮನುಜನಿಗೆ ಉರಿಯುವ ಬೆಂಕಿ. ನಾವಿಬ್ಬರೂ ಈ ಭೂಮಿಯ ಮಕ್ಕಳು ಎಂದು ಮರೆತೆವು, ಸಹಬಾಳ್ವೆಯ ಪಾಠವ ಎಂದೂ ಕಲಿಯಲಿಲ್ಲ. ಗೋಡೆ ಕಟ್ಟಿ ಬದುಕುವುದಲ್ಲ ಪರಿಹಾರ, ಸಮತೋಲನ ಕಾಯ್ದುಕೊಳ್ಳುವುದೇ ಈಗ ಆಧಾರ. ಕಾಡು ಉಳಿದರೆ, ನಾಡು ಬಾಳುವುದು ಸುಖದಿ, ಶಾಂತಿ ಇರಲಿ ನಮ್ಮ ಬದುಕಿನ ಪ್ರತೀ ಹೆಜ್ಜೆಯಲಿ.
----------------------------------
ನೋಂದಣಿ ಐಡಿ : KPFS2-6048