ಕನ್ನಡದ ಕಂದ
ರಚನೆ : ವಿದ್ಯಾಶ್ರೀ ಬೆಳ್ಳುಬ್ಬಿ
----------------------------------
ಕನ್ನಡ ಎನ್ನ ಹೆಸರೇ ಎಷ್ಟು ಚೆಂದ ಕನ್ನಡಕ್ಕಾಗಿ ಮಿಡಿಯುವ ಮನಗಳು ಇನ್ನೆಷ್ಟು ಅಂದ ಕನ್ನಡ ಕನ್ನಡ ಕನ್ನಡ ಎಷ್ಟು ಹೇಳಿದರೂ ತೀರದ ಆನಂದ ಕನ್ನಡದ ಇತಿಹಾಸ ಕೇಳಿದ ಎನ್ನ ಕಿವಿಗಳೇ ಧನ್ಯ ಕನ್ನಡದ ಗತವೈಭವ ನೋಡಿದ ಎನ್ನ ಕಣ್ಣುಗಳೆ ಪುಣ್ಯ ಕನ್ನಡ ಕನ್ನಡ ಕನ್ನಡ ಹೇಳುವ ಮನಗಳಲ್ಲಿರುವುದು ಕಾರುಣ್ಯ ಕೃಷ್ಣೆ ಕಾವೇರಿಯಿಂದ ಮೈದುಂಬಿಕೊಂಡ ಕನ್ನಡ ಜಲ ಉತ್ತರದಿಂದ ದಕ್ಷಿಣದ ವರೆಗೆ ಹಸಿರಿನಿಂದ ಚೆಲ್ಲಿದ ಕನ್ನಡ ನೆಲ ಕನ್ನಡ ಕನ್ನಡ ಕನ್ನಡ ಈ ಸುಗಂಧ ಪಸರಿಸಲಿ ಜಗದಗಲ
----------------------------------
ನೋಂದಣಿ ಐಡಿ : KPFS2-6070