ಸುಂಕದ ನೆಮ್ಮದಿ
ರಚನೆ : ಪ್ರಾಂಜಲಿ ದೇವಾನಂದ
----------------------------------
ಹಿಡಿಯಷ್ಟು ನೆಮ್ಮದಿ ಸಿಗಬಹುದೇ ಸುಂಕಕೆ? ಬಿಕರಿಗಿದೆಯೆ ಮನುಜನ ಕಾಳಸಂತೆಯಲಿ? ಬಡವನ ಬವಣೆಯ ಹಂಗಿದೆಯೆ ಕೊಳ್ಳಲು? ಅಥವಾ ಸಿರಿವಂತನ ಸಿರಿವಂತಿಕೆಯ ಲಗಾಮೋ? ಭವದ ಚಾರಣದ ಜೊತೆಗೆ ಬವಣೆಯ ಉಚಿತ ಇನಾಮೇ? ಭಾವನೆಗಳ ಸ್ಮಶಾನದಲಿ ಸುಟ್ಟು ಚರಮ ಗೀತೆ ಹಾಡಿದೆಯೇ? ಬಂಧಗಳ ಮೂಟೆ ಕಟ್ಟಿ ಹರಾಜಿಗಿಟ್ಟಿದೆಯೇ? ಬೇನೆ ಬೇಗುದಿಗಳ ಅಳತೆ ಎಷ್ಟು?ಅರಿವಿಗಿದ್ದಷ್ಟೋ, ಅರಿವಾಗದಷ್ಟೋ? ವಿಷಾದ ವಿಷಯಗಳೆಲ್ಲವೂ ಅಪೂರ್ಣವೆ, ಸಂತಸಕೂ ಸವಿನಯಕೂ ಭಾವವೆಷ್ಟು? ಬಚ್ಚಿಟ್ಟ ಭರಪೂರದಷ್ಟೋ,ಮಿಂಚಿದ ಮಂದಹಾಸದಷ್ಟೋ? ಪ್ರೀತಿ ರೀತಿಯ ನೀತಿ ಪರಾನುಭೂತಿಯೆ, ಓ, ಅಸ್ತಂಗತ ಅಂತರಾತ್ಮ.
----------------------------------
ನೋಂದಣಿ ಐಡಿ : KPFS2-6069