Submission 1519

ಪರ್ಯಾಯ

ರಚನೆ : ಅನುಷಾ ಹೆಗ್ಡೆ

----------------------------------

ಬಾನ ತಾರಸಿಗೆ ಎಷ್ಟು ತೂತುಗಳೋ ಬಲ್ಲವರಾರು? ಬೆಳಕಿಂಡಿಗಳಂತೆ, ಬೆಳಕಂತೂ ಆಯಿತು ಬಿಡಿ, ಚೈತನ್ಯ ಉಸಿರಾಡುವ ಗಾಳಿಗೆ ಮಾರ್ಗಗಳು.. ಕಾರ್ಗತ್ತಲ ಮನದೊಳಗೆ! ಮಳೆ ಮೋಡ ಒಳಬಂದು, ಗುಡುಗುಡಿಸಿ ಮಿಂಚು ಹರಿಸಿ ಈ ಬೆಳಕಿಂಡಿಗಳನು ಮುಚ್ಚಿಹಾಕಲು, ಕತ್ತಲೇ ಬೆಳಕಿನಂತೆ ಈಗಿಗ, ನಿರ್ವಾತ. ಆದರೇನು? ಚೈತನ್ಯದ ಗಾಳಿಯ ಉಸಿರಾಟ ಬಿಟ್ಟಿಲ್ಲ, ಪಟ ಪಟನೆ, ತೊಪ ತೊಪನೆ ಸೋನೆಯಾಗಿ ಬೀಳುವ ಮಳೆಹನಿಗಳು, ಪರ್ಯಾಯ. ತಾರೆಗಳಿಗೆ..

----------------------------------

ನೋಂದಣಿ ಐಡಿ : KPFS2-6068

3
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top