Submission 1489

ಅಮ್ಮಾ

ರಚನೆ : ಸಜಿ ಆರ್ ತುಮರಿ

----------------------------------

ಆಕೆಯ ದಿವ್ಯ ಪ್ರೇಮ ವರ್ಣಿಸಲು ನನ್ನಲ್ಲಿ ಶಬ್ದಗಳ ಬಡತನ ಇದೇ ವರ್ಣಾತೀತ ಪ್ರೇಮ...! ಇಲ್ಲಿ ಮಾತು ಮೌನ ಲೇಖನಿ ಸ್ಥಗಿತ... ನೆನಪು ಎನ್ನ ಮನದಿ ಶಾಶ್ವತ... ಅವಳು ಎನ್ನ ಮನದಿ ಚಿರ ದೇವನಿವಾಸಿ... ಅವಳ ಹೊಟ್ಟೆಯ ಬಗೆದು ಬಂದೆನೆಂದು ಬೈಗುಳ ಇಟ್ಟವಳಲ್ಲ...! ಪ್ರೀತಿಯಾ ತುತ್ತನ್ನು ಇಟ್ಟವಳು.. ನಾ ಬಿದ್ದಾಗ ಎತ್ತಿದವಳು... ನಾ ನಡೆದಾಗ ಖುಷಿಯ ಗಂಟ್ಟಿಕ್ಕಿದವಳು... ಅಳುವಾಗ ನಗಿಸಿ ನಗುವಾಗ ಮುದ್ದಾಡಿದವಳು... ಅಮ್ಮಾ ಅನ್ನುವಾಗ ಅದೇನೋ ಒಂಥರಾ ಆನಂದ...! ಅದಕ್ಕಿಂತ ಮಿಗಿಲಾದ ಪದ ಬೇಕಿಲ್ಲಾ ಅದುವೇ ಚೆಂದ...

----------------------------------

ನೋಂದಣಿ ಐಡಿ : KPFS2-6046

135
Votes
727
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top