ದುಡಿಯುವಳು ನನ್ನವ್ವ
ರಚನೆ : ಸುದರ್ಶನ್ ಎಸ್
----------------------------------
ತಲೆ ಮೇಲಿನ ಸೂರಿಗಾಗಿ ಸಾಗರವೆಂಬ ಸಂಸಾರಕ್ಕಾಗಿ ಒಂದಿಂಚಿನ ಬಟ್ಟೆಗಾಗಿ ದುಡಿಯುವಳು ನನ್ನವ್ವ ಕುಟುಂಬದ ಆಸರೆಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಡಲ ಜವಾಬ್ದಾರಿಗಾಗಿ ದುಡಿಯುವಳು ನನ್ನವ್ವ ಬೆನ್ನು ಬಿದ್ದ ಬಡತನಕ್ಕಾಗಿ ಬಯಲಾಟವೆಂಬ ಬದುಕಿಗಾಗಿ ಜೀವನವೆಂಬ ಬಂಧಕ್ಕಾಗಿ ದುಡಿಯುವಳು ನನ್ನವ್ವ ಕಂದನ ಹೊಟ್ಟೆಗಾಗಿ ಒಂದೊತ್ತಿನ ತುತ್ತಿಗಾಗಿ ಮೂರೊತ್ತಿನ ನೆಮ್ಮದಿಗಾಗಿ ದುಡಿಯುವಳು ನನ್ನವ್ವ
----------------------------------
ನೋಂದಣಿ ಐಡಿ : KPFS2-6039