ಬಯಲುಗಂಬಾರ
ರಚನೆ : ಕಾಶಮ್ಮ ಕರಿಕಟ್ಟಿ
----------------------------------
ಓ ಬಯಲು ಗಂಬಾರ ನಿನಗೇಕೆ ಇಂಥ ಸತ್ಕಾರ ಜನರ ಅವಶ್ಯಕತೆಗಳಿಗೆ ನೀನಾಗುವೆ ಹರಿಕಾರ ಆದರೆ ನಿನಗೆ ಸಿಗಲಿಲ್ಲವೇ ಯಾವುದೇ ಸಹಕಾರ ಆಯುಧಗಳ ಒಡೆಯ ನೀನು ಊರಿನ ನಟ್ಟ ನಡುವೆ ಬಿಸಿಲು ಗಾಳಿಯನ್ನದೆ ಬಡೆಯುವೆ ಕಬ್ಬಿಣವ ಕಾಸಿ ನಿನ್ನ ಹೆಂಡಿರ ಮಕ್ಕಳ ಸ್ಥಿತಿಗೆ ಆ ದೇವರೇ ಸಾಕ್ಷಿ ಪರ ಊರ ನಿಲ್ದಾಣವೇ ನಿನ್ನ ಅರಮನೆ ಪರ ಊರ ನಲ್ಲೇಯೇ ನಿನ್ನ ಸಮುದ್ರ ಚಿಕ್ಕ ಮಕ್ಕಳ ಶಿಕ್ಷಣ ಛಿದ್ರ ಛಿದ್ರ ಅಸೂಯೆಗಳಾದವು ವಿಚಿತ್ರ ನಿನ್ನ ಶಕ್ತಿ ಸಾಮರ್ಥ್ಯಕ್ಕೆ ಇಲ್ಲಿಲ್ಲ ಸರಿಸಾಟಿ ಘನ ಸರಕಾರ ನಿನ್ನ ನೋಡಬೇಕು ಮನ ಮೀಟಿ ಒಟ್ಟಾಗ ಬೇಕೆಲ್ಲ ನಿನ್ನ ಕಮಿಟಿ ಇರಬೇಕು ಪ್ರತಿ ನಾಡಲ್ಲಿ ನಿನಗಾಗಿ ಒಂದು ಊಟಿ
----------------------------------
ನೋಂದಣಿ ಐಡಿ : KPFS2-6038