ನಮ್ಮ ತಾಯಿ ಭಾರತಾಂಬೆ
ರಚನೆ : ಆಶಾ ವಿನೀತ್ ಭಟ್
----------------------------------
ಜಯ ಜಯವೆನ್ನಿರಿ ತಾಯಿ ಭಾರತಿಗೆ ಜಯ ಜಯವೆನ್ನಿರಿ ಕರುಣಾಮಯಿಗೆ ನೆಲ ಜಲ ಗಾಳಿಯ ಸಂಪದದೊಂದಿಗೆ ಅವಳಿತ್ತಿಹ ಬೆಳೆ ನಮ್ಮುಸಿರು ಪ್ರೀತಿ-ಪ್ರೇಮ, ಸೌಹಾರ್ದತೆ, ಜೀವನ- ಪಥದಲಿ ತುಂಬಿದೆ ಆ ಬಸಿರು ಭಾರತಾಂಬೆಯ ವೀರ ಪುತ್ರರು ತಾಯ ಬಂಧನವ ಹರಿಸಲಿಕೆ ಪ್ರಾಣತ್ಯಾಗವ ಮಾಡಿದರವರ ಋಣವನು ತೀರಿಸೆ ನಮ್ಮಳವೆ ದ್ವೇಷಾಸೂಯೆಯನಳಿಸಿ ಹಾಕುತ ಸಮರಸ ಜೀವನ ನಡೆಸೋಣ ಭವ್ಯ ಭಾರತದ ಕೀರ್ತಿ ಪತಾಕೆಯ ಜಗದುದ್ದಗಲಕೆ ಮೆರೆಸೋಣ
----------------------------------
ನೋಂದಣಿ ಐಡಿ : KPFS2-6026