Submission 850

ಅಮ್ಮ

ರಚನೆ : ಶ್ರೀನಿವಾಸ ಬಂಡಳ್ಳಿ

----------------------------------

ಅಮ್ಮ ನಿನ್ನ ಗರ್ಭಗುಡಿಯ ಸಾಮ್ರಾಜ್ಯದಲ್ಲಿ ಅಧಿಪತಿಯಾಗಿ ಮೆರೆಯುತ್ತಿದ್ದೆ ಬೆಚ್ಚನೆಯ ಕೋಟೆಯಲ್ಲಿ ಅಲ್ಲಿ ನನಗಾರ ಭಯವಿರಲಿಲ್ಲ,ಮೇಲು-ಕೀಳಿರಲಿಲ್ಲ ದುಖ-ದುಮ್ಮಾನವಿರಲಿಲ್ಲ,ಬಡವ-ಶ್ರೀಮಂತರಿರಲಿಲ್ಲ ಸಾವು-ನೋವುಗಳಿರಲಿಲ್ಲ,ಆಸೆ-ನಿರಾಸೆಗಳಿರಲಿಲ್ಲ ಸ್ವಾರ್ಥತನವಿರಲಿಲ್ಲ,ನಾನೆಂಬ ಅಹಂಕಾರವಿರಲಿಲ್ಲ ಮುತ್ತಿನ ಪಲ್ಲಕ್ಕಿಯೊಳಗೆ ಮುತ್ತಿನ ಹಾರವ ಕೊರಳಿಗೆ ಸುತ್ತಿಕೊಂಡಿದ್ದೆ ನಾ ಕೇಳುವ ಮೊದಲೇ ನಾಭಿಯಿಂದ ನೀ ಅಮೃತ ಉಣಿಸುತ್ತಿದ್ದೆ ಹಸಿವೆಂಬುದಿರಲಿಲ್ಲ ಅಲ್ಲಿ ಸ್ವರ್ಗಲೋಕವೇ ಅದು ನೀ ನಡೆದಾಗಲೆಲ್ಲ ಪಲ್ಲಕ್ಕಿ ಮೇಲೆ ಮೆರವಣಿಗೆ ಹೊರಟಂತೆ ಹಗಲಿರುಳು ಹೊತ್ತು ಮೆರೆಸಿ ಏಕೆ ಕರೆದೆ ಅಮ್ಮ? 'ನಾಕ'ದಿಂದ 'ನರಕ'ಕ್ಕೆ ನನ್ನ

----------------------------------

ನೋಂದಣಿ ಐಡಿ : KPF-S1-5388

0
Votes
150
Views
1 Year
Since posted
Scroll to Top