Submission 743

ಒಳಗಣ್ಣ ತೆರೆದು ನೋಡಿರಿ

ರಚನೆ : ಕಲ್ಪನಾ ಶಂಕರಗೌಡ ಪಾಟೀಲ

----------------------------------

ಹೆಣ್ಣಿಗೇಕೆ ಅಬಲೆಯೆಂಬ ಹಣೆಪಟ್ಟಿ ಅಷ್ಟೇಕೆ ಮನದೊಳು ವಿಚಾರಖೊಟ್ಟಿ ಅವಳ ಅರಿಯದಿದ್ದರೆ ನೀ ಕೆಟ್ಟಿ ನಿನ್ನೊಳಗಣ್ಣ ತೆರೆದು ನೋಡೋದ್ಯಾಕ ಬಿಟ್ಟಿ? ಹೆಣ್ಣು ಅಬಲೆ ಎಂದೀರಿ ತಪ್ಪು ಸಬಲೆ ಎನ್ನಿರಿ ಒಳಗಣ್ಣ ತೆರೆದು ನೋಡಿರಿ ಪ್ರೀತಿಯ ಹಂಚಿ ಪಡೆಯಿರಿ. ವಿವೇಕದಿ ನಡೆಯುವದ ಮರೆಯದಿರಿ ವಿಚಾರದಲಿ ಮೇಲು ಕೀಳೆನ್ನದಿರಿ ಹಾರಿಹೋಗುವ ಹಕ್ಕಿರೆಕ್ಕೆಯ ಎನಿಸುವ ಗುರಿ ಹೆಣ್ಣೆಂದು ಹಗುರಾಗಿ ಕಾಣದಿರಿ. ಹೊಗಳಿ ಹೊಣ್ಣಶೂಲಕ್ಕೇರಿಸುವರ ಬಲ್ಲಳು ತೆಗಳುವರ ನೇರವಾಗಿ ಎದುರಿಸುವಳು ಮುಂದೊಂದು ಹಿಂದಾಡುವರ ಸಹಿಸಳು.

----------------------------------

ನೋಂದಣಿ ಐಡಿ : KPF-S1-5332

0
Votes
155
Views
1 Year
Since posted
Scroll to Top