Submission 647

ಕಳೆದುಕೊಂಡವರು

ರಚನೆ : ಮಂಜುನಾಥ ವಿ

----------------------------------

ನೀ ನನ್ನ ಕಳೆದುಕೊಂಡೆಯ, ನಾ ನಿನ್ನ ಕಳೆದುಕೊಂಡೆನೆ ಈಗ ಹಳಿದುಕೊಂಡರೇನು ನನ್ನ ನಾ ತೆಗಳಿಕೊಂಡರೇನು ಯಾಕೋ ಹಿಡಿದಿಟ್ಟ ಭಾವ ಪೂರ್ತಿಯಾಗಿ ತೆರೆದುಕೊಳ್ಳದೆನೊ ನಿಂತುಬಿಟ್ಟಿಯಲ್ಲ ದೂರ, ನಾವಿಬ್ಬರೆಷ್ಟು ಹೊಲಿದರೇನು ಬಿಟ್ಟರೇನು ಅಂಜಿಕೆಯೊ, ಸಂಕೋಚವೋ, ಉದ್ವೇಗವೋ ಮತ್ತದೇನೊ ಹೇಳು ಸಂಯಮದ ಗೆರೆಯ ನಾ ದಾಟಿಬಿಡಲೇನು ಯಾವ ಜನುಮದ ನಂಟೋ, ಬಿಟ್ಟು ಬಿಡದ ಅಂಟೊ ಎದೆ ಬಿಚ್ಚಿ ಹೇಳಿಬಿಡಲೇನು, ಇಲ್ಲ ಬಚ್ಚಿಟ್ಟು ಕಗ್ಗಂಟಾಗಲೇನು

----------------------------------

ನೋಂದಣಿ ಐಡಿ : KPF-S1-5253

0
Votes
173
Views
1 Year
Since posted
Scroll to Top