Submission 499

ಅವಳೇ ನನ್ನಯ ರೂಪಕ

ರಚನೆ : ಯಶವಂತ ಎಸ್ ಕೆ

----------------------------------

ಅವಳ ನೋಡಿದ ಮೇಲೆಯೂ ಹೇಗಿರಲಿ ಸುಮ್ಮನೆ ಸೆಳೆಯುತಿಹಳು ಸೂಜಿಗಲ್ಲಿನಂತೆ ದೂರದಿಂದಲೂ ನನ್ನನೆ ನೆಪ ಹುಡುಕಿದೆ ಅವಳ ಜೊತೆ ಹೇಗಾದರೂ ಮಾತಾಡಲು ನಿತ್ಯ ಎರಡೇ ಪದ ಅವಳ ಮಾತೃಭಾಷೆಯಂಬಂತೆ ನುಡಿದು ಕಾಣೆಯಾಗುವಳು ಇದು ಸತ್ಯ ಅವಳದು ಹಾಗೆಯೇ ಮಾತು ಬೆಳ್ಳಿ,ಮೌನ ಬಂಗಾರ ಕಿವಿಗೆರಡು ಓಲೆ ಒಂದು ಬೊಟ್ ಕುಂಕುಮ ಸಣ್ಣ ನಗು ಇದೇ ಅವಳ ಅಲಂಕಾರ ಬೆಳಗಿನ ಪಾಳಿಯ ಚಂದ್ರಮಳು ಇವಳೇ ಎನ್ನುವ ಶಂಕೆ ಮುಂಗುರುಳ ಸರಿಸುವುದ ನೋಡುವುದರಲ್ಲೇ ಹೃದಯ ನಿಲ್ಲುವುದು ಜೋಕೆ ವಿಶ್ವದ ಎಲ್ಲಾ ಸುಂದರ ಪದಗಳ ಹೆಣೆದು ರಚಿಸಲಾದ ಅದ್ಭುತ ಕವಿತೆ ಭಾವ ರಾಗ ತಾಳಗಳ ಮಹಾಸಂಗಮವೇ ಈ ನಿಜ ವನಿತೆ.

----------------------------------

ನೋಂದಣಿ ಐಡಿ : KPF-S1-5070

0
Votes
133
Views
1 Year
Since posted
Scroll to Top