ಪ್ರೇಮ ಎಂದರೆ...
ರಚನೆ : ಅನೂಷಾ ಕೆ ಎನ್
----------------------------------
ಅಲ್ಲಿ ಪಡೆಯಲೇಬೇಕೆಂಬ ಹುಚ್ಚು ಸ್ವಾರ್ಥದ ಸೋಂಕಿಲ್ಲ; ಕೊಟ್ಟಷ್ಟೂ ಹೆಚ್ಚುವ ಪ್ರೀತಿಯ ಭಾವನೆಗಳೇ ಎಲ್ಲ. ಒಮ್ಮೆ, ಪ್ರೀತಿಯ ಜೀವ ತಲುಪಲಾರದ ಒಂಟಿ ಹೃದಯದ ಕೂಗು; ಮತ್ತೊಮ್ಮೆ, ದನಿ ತಲುಪಿದರೂ ಒಪ್ಪಿ ಒಲಿಯಲಾರದ ಸೋಗು. ಅದೊಂದು ಮುಳುಗಿದರೂ ಆಳ ಅರಿಯಲಸದಳವೆಂಬ ಶರದಿ; ರವಿಯ ಸ್ಪರ್ಶಮಾತ್ರಕ್ಕೆ ಹನಿಯು ಮುಗಿಲಾಗುವ ಕೌತುಕದ ತೆರದಿ. ಪ್ರೇಮ... ಅದು ಹಸುಗೂಸಿನ ನೊಸಲ ಘಮದಷ್ಟೇ ಪರಿಶುದ್ಧ... ಪ್ರೇಮ... ವಾಂಛೆ ಮೀರಿ ನಿಂತ ಯುಗಲ್ ಆತ್ಮಗಳ ದಿವ್ಯ ಬಂಧ...
----------------------------------
ನೋಂದಣಿ ಐಡಿ : KPFS2-2403