ಈ ಜೀವನ
ರಚನೆ : ಭವಾನಿ
----------------------------------
ಬಲು ಕಷ್ಟ ಈ ಜೀವನ ತಿಳಿಯಿತು ನನಗೆ ಈ ದಿನ ಈ ಜೀವನದ ಓಟದಲ್ಲಿ ಸೋಲುವೆ ನಾನು ಪ್ರತಿಕ್ಷಣ ಸೋತರು, ಸತ್ತರು ಬೆಂಬಿಡದೆ ತನ್ನವರಿಗಾಗಿ, ಜವಾಬ್ದಾರಿಯಾಗಿ ಯಾವುದೋ ಅನಿವಾರ್ಯದ ಹೆಸರಿನಲ್ಲಿ ಮತ್ತೆ ಮತ್ತೆ ಮೇಲೆಬ್ಬಿಸಿ ವಿಶ್ವಾಸ,ನಂಬಿಕೆಯನ್ನು ತುಂಬಿ ಮತ್ತೆ ಸೋಲಿಸುವುದು ನನ್ನ ಯಾಕಿಷ್ಟು ದ್ವೇಷ ಈ ಜೀವನಕ್ಕೆ ತಿಳಿದಿಲ್ಲ ಒಂದೇ ಒಂದು ಮನವಿ ಒಮ್ಮೆಯಾದರೂ ಗೆಲ್ಲಿಸು ನನ್ನ ಇಲ್ಲವಾದರೆ ನಿಲ್ಲಿಸು ಈ ಹುಸಿ ಆಶ್ವಾಸನೆಯನ್ನ...
----------------------------------
ನೋಂದಣಿ ಐಡಿ : KPFS2-2358