Submission 7388

ಒತ್ತಡದ ಬದುಕು

ರಚನೆ : ಗೋದಾವರಿ ಅನಂತರಾವ ದೇಶಪಾಂಡೆ ಮೂಡಲಗಿ

----------------------------------

ನಾಗಾಲೋಟದಲ್ಲಿ ಓಡುತ್ತಿದೆ ಆಧುನಿಕ ಜಗತ್ತು ಯಾರೊಂದಿಗೂ ಮಾತನಾಡಲು ಪುರುಸೊತ್ತಿಲ್ಲ ಇವತ್ತು ಆಸೆಗಳ ಬೆನ್ನಹತ್ತಿ ದುಡ್ಡಿಗಿಲ್ಲ ಕಿಮ್ಮತ್ತು ಜೀವನ ಚಕ್ರದಲ್ಲಿ ತೋರುತ್ತಿದೆ ಗಮ್ಮತ್ತು ಬಾಳು ತೃಪ್ತಿಯಿಲ್ಲದ ಕನಸಿನ ಕವನ ಒತ್ತಡದ ಬದುಕು ನೆಮ್ಮದಿಯಿಲ್ಲದ ಜೀವನ ಎಷ್ಟು ದುಡಿದರೂ ಏನು ಪ್ರಯೋಜನ ಮನಸಿಗಿಲ್ಲದ ಪ್ರೀತಿ ವಿಶ್ವಾಸದ ಸಿಂಚನ ಬದುಕಿಗಾಗಿ ಹಗಲಿರಳು ಕಷ್ಟದ ಹೋರಾಟ ಛಲದಲಿ ಈಸುವಾಗ ಸಂಸಾರದ ಜಂಜಾಟ ನೂರೊಂದು ಕನಸಿಗಾಗಿ ಅತ್ತಿತ್ತ ಪರದಾಟ ಜಾಣ್ಮೆಯಲಿ ಸಾಗಿದರೆ ಬಾಳ್ವೆಗೊಂದು ಪಾಠ

----------------------------------

ನೋಂದಣಿ ಐಡಿ : KPFS2-2353

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top