ಆತ ನಿಂತಿದ್ದ...ಅವಳಿಗಾಗಿ!
ರಚನೆ : ಅಕ್ಷತಾ ಹೂಲಿ
----------------------------------
ಹೌದು! ಆತ ನಿಂತಿದ್ದ ಅವಳಿಗಾಗಿ ಕಾದು ನಿಂತಿದ್ದ ಅವಳಿಗೆ ಮುಖ ತೋರಿಸಿ ಹೋದರಾಯ್ತೆಂದು ಆತ ನಿಂತೇಬಿಟ್ಟಿದ್ದ ಬಂದೇ ಬಿಟ್ಟಳು ಆಕೆ, ಆತನ ಕಂಡು ಕುಣಿದಾಡಿದಳು ಆತ ಈಕೆಯ ಕಂಡು ನಕ್ಕಾಗ ಇವಳಿಗೋ ಬಲು ಖುಷಿ ಆತ ಹೊರಟಿದ್ದರೂ ಇಬ್ಬರೂ ಹಸನ್ಮುಖಿಯಾಗಿದ್ದರು ಗೊತ್ತಿದೆ ಇಬ್ಬರಿಗೂ ನಾಳೆ ಮತ್ತೆಭೇಟಿಯಾಗುವುದೆಂದು ಆಕೆ ನೋಡುತ್ತಾ ನಿಂತಿದ್ದಳು ನೋಡನೋಡುತ್ತ ನಿಮಿಷದಲ್ಲಿ ಆತ ಹೊರಟುಹೋದ ಪಡುವಣ ದಿಕ್ಕಿನಲ್ಲಿ ಸೂರ್ಯ ಕರಗಿ ಹೋದ ಹನುಮಂತನ ಅನುಮಾನ ಸರಿಯಿತ್ತೆಂದನಿಸಿತವಳಿಗೆ ಆತ ನಿಜವಾಗಿಯೂ ಕಿತ್ತಳೆ ಹಣ್ಣಿನಂತವನು ನಾಳೆ ಮತ್ತೆ ಸಿಗೋಣವೆಂದೆನ್ನುತ್ತ ಹುಡುಗಿ ಮನೆಯೊಳಗೋದಳು
----------------------------------
ನೋಂದಣಿ ಐಡಿ : KPFS2-2273