ನಮ್ಮ ಸಪ್ನ
ರಚನೆ : ಹಂಸಿನಿ. ಎಂ
----------------------------------
ಜ್ಞಾನಕಣಜ ನಮ್ಮ ಸಪ್ನ ಪುಸ್ತಕ ಬಂಡಾರ ಸರಸ್ವತಿಯೇ ನೆಲೆಸಿರುವ ಜ್ಞಾನ ಮಂದಿರ ಓದುಗರ ದಾಹ ನೀಗಿಸುವ ಗಂಗಾ ಮಾತೆ ವಿದ್ಯಾರ್ಥಿಯರ ಆಸ್ತಿ ಆಗಿರುವ ಜ್ಞಾನ ಮಾತೆ. ಭಾವವ ತರಿಸುವ, ಸಂತೋಷವ ಬರಿಸುವ ಜ್ಞಾನವ ಹೆಚ್ಚಿಸುವ, ಸುಜ್ಞಾನವ ಬೆಳೆಸುವ ಒತ್ತಡಗಳ ನಿಲ್ಲಿಸುವ, ಕೌಶಲ್ಯಗಳ ಬರಿಸುವ ಪುಸ್ತಕಗಳ ಸಾಲು ಇಲ್ಲಿವೆ. ಕಾದಂಬರಿ ಬರೆಯಲು ಲೇಖನಿಯುoಟು ಚಿತ್ರವ ಬಿಡಿಸಲು ಬಣ್ಣವುಂಟು ಇದಕ್ಕಿಂತ ಇನ್ನೇನು ಬೇಕು ನಿನಗೆ ನರ ಜ್ಞಾನಕಣಜ ನಮ್ಮ ಸಪ್ನ ಪುಸ್ತಕ ಬಂಡಾರ.
----------------------------------
ನೋಂದಣಿ ಐಡಿ : KPFS2-2257