ಬಸ್ ಸ್ಟ್ಯಾಂಡ್ ಮತ್ತು ಅವಳು
ರಚನೆ : ಶ್ರೀಧರ ಶೇಟ್ ಶಿರಾಲಿ
----------------------------------
ಬಸ್ ಸ್ಟ್ಯಾಂಡಿನ ಎದೆಯ ಮೇಲೆ ಚಕ್ರಗಳು ಪರಚಿದ ಗಾಯಗಳು ಸಿಗರೇಟು ಬೀಡಿ ತುಂಡಿನ ಸುಟ್ಟ ದಾಖಲೆಗಳು ಬಂದ ಗಾಡಿಗಳು ನಿಲ್ಲುವುದಿಲ್ಲ ಶಾಶ್ವತವಾಗಿ ಹೋಗುತ್ತವೆ ಬಂಧಗಳಿಲ್ಲದೆ, ಭಾವನೆಗಳಿಲ್ಲದೆ ಹಗಲಿಗೂ ರಾತ್ರಿಗೂ ವ್ಯತ್ಯಾಸವಿಲ್ಲ ಬಸ್ ಸ್ಟ್ಯಾಂಡಿನ ಕಣ್ಣುಗಳಿಗೆ ನಿದ್ರೆ ಹತ್ತುವುದಿಲ್ಲ ಅವಳ ಎದೆಯ ಮೇಲೂ ವಿಟರು ಪರಚಿದ ಗುರುತುಗಳು ಸಿಗರೇಟಿನಿಂದ ಸುಟ್ಟ ಕಲೆಗಳು ಅಲ್ಲೂ ಹಗಲು ರಾತ್ರಿಗೂ ವ್ಯತ್ಯಾಸವಿಲ್ಲ ಕಾಯುವ ಕಣ್ಣುಗಳಿಗೆ ನಿದ್ರೆ ಹತ್ತುವುದಿಲ್ಲ ಬಸ್ ಸ್ಟ್ಯಾಂಡಿನಂತೆ ಅವಳು ಅಂದುಕೊಳ್ಳುತ್ತಾಳೆ ಶಾಶ್ವತವಾಗಿ ನಿಲ್ಲುವ ಗಾಡಿ ಬರಬಹುದೇ ಎಂದು ಎದೆಗೆ ಇಳಿವ ಪುರುಷ ಸಿಗಬಹುದೆ ಎಂದು!
----------------------------------
ನೋಂದಣಿ ಐಡಿ : KPFS2-2233