Submission 7148

ಜೀವನ ಪಥ

ರಚನೆ : ಚೈತ್ರ ಲಕ್ಷ್ಮೀ

----------------------------------

ಮನಬಿಚ್ಚಿ ನಗಲು ನೀ ಏಕೆ ಹಿಂಜರಿವೆ ಬದಿಗಿಡು ಜಗದ ಜಂಜಾಟದ ಚಿಂತೆ ಈ ಕ್ಷಣದ ಬೆಲೆಯ ನೀ ಎಂದು ಅರಿವೆ ಕಳೆಯುವುದು ಸಮಯ ಹರಿವ ನದಿಯಂತೆ ಹರಿದ ನದಿಯ ನೀರು ಮಗದೊಮ್ಮೆ ಸಿಕ್ಕೀತೇ ಕಳೆದು ಹೋದ ಸಮಯ ಹಿಂತಿರುಗಿ ಬಂದೀತೇ ಬರಿ ಸೊನ್ನೆ ಅಂತರದಿ ಚಿಂತೆಯಾಗುವುದು ಚಿತೆ ಯಾರಿಗಿಲ್ಲ ಇಲ್ಲಿ ಕಡು ನೋವಿನ ಕಥೆ ಮುನ್ನಡೆ ಒಂದೊಂದೆ ಹೆಜ್ಜೆಯ ಎತ್ತಿಟ್ಟು ಕೈ ಬೀಸಿ ಕರೆಯುವ ಗೆಲುವಿನ ಕಡೆಗೆ ಸಾಗು ನೀ ಹಾದಿಯಲಿ ಸಿಹಿ ನೆನಪ ಕೂಡಿಟ್ಟು ನಗುತ ನಗಿಸುತಾ ಕಲಿತ ಪಾಠದ ಜೊತೆಗೆ

----------------------------------

ನೋಂದಣಿ ಐಡಿ : KPFS2-2166

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top