ಅಜರಾ'ಮರ' ತಿಮ್ಮಕ್ಕ
ರಚನೆ : ವಾಣಿ ಎಂ ಬಿ
----------------------------------
ಬದುಕಿನ ಜಂಜಾಟದಲಿ ಓಡುತಿಹನು ಮಾನವ ನನಗೇನೂ ಸಿಕ್ಕಿತೆಂದು ಬಯಸಿ ನಿತ್ಯ ದುಡಿಯುವ ತನ್ನ ಸುಖವೇ ಪರಮೋದ್ದೇಶ ಬೇರೆಲ್ಲಾ ಮರೆಯುವ ಕಿಂಚಿತ್ತೂ ಕಡಿಮೆಯಾಗೆ ಅಸಹನೀಯ ಎನ್ನುವ ನವಜಾತ ನಾಮಧೇಯಕೆ ನಡೆಸುವರು ಹುಡುಕಾಟವ ತಿಮ್ಮತಿಮ್ಮಿ ಎಂದು ನಗುತ ಪ್ರೇಮಿ ಕಾಲ ಕಳೆಯುವ ಸಂತಾನ ಹೀನ ಜೋಡಿಯೊಂದು ಚಿಂತಿಸಿತು ನವನವೀನದಿ ಸಸ್ಯರಾಶಿಯೇ ಎಮ್ಮ ಮಕ್ಕಳೆಂದರು ನಿಶ್ಚಿತದಿ ಪರಿಸರ ದಿನಾಚರಣೆ ಅವರಿಗಂತೂ ನಿತ್ಯದಿ ಸಾಲುಸಾಲಾಗಿ ನಿಂತವು ಮರಗಳು ರಸ್ತೆ ಬದಿ ಪತಿಯೂ ಬೆಂಬಲಿಸಿ ನಿಂತೆ ಸಾಲು ಮರದ ತಿಮ್ಮಕ್ಕ ಹೇಳತೀರೆ ನಿಮ್ಮ ಕೊಡುಗೆ ಅಜರಾ'ಮರ' ನೀನಕ್ಕ
----------------------------------
ನೋಂದಣಿ ಐಡಿ : KPFS2-2162