Submission 6986

ಅವನ್ಯಾರೋ!

ರಚನೆ : ಸಂತೋಷ ಪಟಗಾರ್

----------------------------------

ನಶ್ವರದ ಈ ಜಗದೊಳು ನಿನ್ನ ಬದುಕ ಬರೆದವನ್ಯಾರೋ ಕರುಳ ಬಳ್ಳಿಯಲಿ ನಿನ್ನ ಹೆಸರ ಬರೆಸಿ ಬದುಕ ಬೆಸೆದವನ್ಯಾರೋ ನಾನು ನನ್ನದೆಂಬ ಬಿಂಬಗಳ ಕೊಳಕೆ ನಿನ್ನ ದೂಡಿ ಈಜು ಕಲಿಸಿದವನ್ಯಾರೋ ಭೂತ ಭವಿಷ್ಯಗಳ ಗೊಜಲಿನಲಿ ಕರ್ಮವೆಂಬ ಮೂಟೆಯ ಬೆನ್ನಗಿಟ್ಟವನ್ಯಾರೋ ನಿನ್ನ ಪಾಪ ಪುಣ್ಯಗಳ ಲೆಕ್ಕ ಇಟ್ಟು ಬಂಧುವಿನಂತೆ ಕಾಯುತಿರುವನ್ಯಾರೋ ಸಮಯ ಮೀರೆ ನಿನ್ನ ಲೆಕ್ಕ ಚುಕ್ತಾ ಉಳಿಸಿ ನಿನ್ನ ಸಾವಿನ ಮನೆಗೆ ದೂಡುವವನ್ಯಾರೋ ಕೂಡಿ ಕಳೆವ ಲೆಕ್ಕದಲಿ ಉಳಿದ ಬಾಕಿಗೆ ನಿನ್ನ ತಿರುಗಿ ನಶ್ವರದ ಈ ಜಗದೊಳು ತಳ್ಳಿ ನಿನ್ನ ಬದುಕ ಬರೆದವನ್ಯಾರೋ

----------------------------------

ನೋಂದಣಿ ಐಡಿ : KPFS2-2024

1
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top