ಬಿಕ್ಕಳಿಕೆ
ರಚನೆ : ಗಿರೀಶ್ ಕಮಲಾಕ್ಷಿ
----------------------------------
ಬಿಕ್ಕಳಿಕೆ! ಎದೆಯ ರಾಗದ ಆಕಳಿಕೆ ಮಾರುದೂರ ಮೂರು ದಿನ ತೊರೆಯಲಾಗದ ತೂಕಡಿಕೆ ನೂರು ದಾರಿ ನೂರೊಂದು ಕನಸು ಕನಸಿನೊಳಗಿನ ಕನವರಿಕೆ ಕ್ಷಣಕು ಮನಕು ಬೆಸೆದ ನಂಟು ವಿವರವಿಲ್ಲದ ವಾಕರಿಕೆ ಜನನ ಜೀವನ ಜನ್ಮದ ಬಂಧನ ಬದುಕು ಬಂಡಿ ಕಾಣದ ಕಿಂಡಿ ಕಾಡುವ ಕಾತುರ ಓಡುವ ಅವಸರ ದಣಿದ ಮನಕೆ ತೀರದ ದಾಹ ಎದೆಯ ಮರೆಯ ನೋವು ಪರಿ ಪರಿಯಾಗಿ ಆಚೆ ಬರಲು ಬಾಯಾರಿದ ಜೀವಕಿದು ಬದುಕು ಬಿಕ್ಕಳಿಕೆ !
----------------------------------
ನೋಂದಣಿ ಐಡಿ : KPFS2-2020