ಭಾರತಾಂಬೆಗೆ ಕನ್ನಡದ ಕಾವ್ಯದಾರತಿ
ರಚನೆ : ಚಂದ್ರಕಲಾ ಜೆ
----------------------------------
ಭಾರತ ಮಾತೆಗೆ ಜ್ಞಾನದಾರತಿ.. ಕನ್ನಡ ಕವಿಗಳ ಕಾವ್ಯ ದಾರತಿ... ಬೆಳಗಲಿ ಬೆಳೆಯಲಿ ಕನ್ನಡ ಕೀರುತಿ ಸಿರಿಗನ್ನಡದ ಸಿರಿಗಂಧ ಎಲ್ಲೆಡೆ ಹರಡಲಿ.. ಕುವೆಂಪು ಬೇಂದ್ರೆ ಮಾಸ್ತಿ ಕಾರಂತರು ಅನಂತ ಚಂದ್ರ ಗಿರೀಶ ಗೋಕಾಕರು ಕನ್ನಡ ಮಾತೆಯ ಜ್ಞಾನ ರತ್ನಗಳು ಭಾರತ ಮಾತೆಯ ಹೆಮ್ಮೆಯ ಪುತ್ರರು ರಾಮಾಯಣ ದರ್ಶನದಿಂದ ಮಿಡಿದ ನಾಕುತಂತಿ ಮೂಕಜ್ಜಿಯ ಕನಸು ಚಿಕ್ಕವೀರರಾಜೇಂದ್ರರ ಗೆಲುವು ಅಂಬರದ ಚಂದ್ರನಿಗೆ ಅನಂತ ಗಿರೀಶ್ ಗೋಕಾಕರ ನಮನ ಭಾರತ ಮಾತೆಗೆ ಸಮಗ್ರತೆಯ ಸಂಸ್ಕಾರದ ನಮನ ಇನ್ನಷ್ಟು ಮತ್ತಷ್ಟು ರತ್ನಗಳು ಭಾರತಾಂಬೆಯ ಮುಕುಟಕೇರಲಿ ಸಿರಿಗನ್ನಡದ ಸಿರಿಗಂಧ ಎಲ್ಲೆಡೆ ಹರಡಲಿ
----------------------------------
ನೋಂದಣಿ ಐಡಿ : KPFS2-2017