ನನ್ನ ಪಯಣ
ರಚನೆ : ನಿವೇದಿತ. ವಿ. ಪ್ರಸಾದ್
----------------------------------
ಬಿದ್ದೆನೆಂದು ಭಯಪಟ್ಟು ನೆಲದಲ್ಲಿ ನಾನೆ ನಿಂತೆನು, ಬಿದ್ದಷ್ಟೂ ಬಲವಾಯಿತು ಪುನಃ ಏಳುವ ನನ್ನ ಮನಸು. ಕಟ್ಟಿದರೆ ತಡೆಗಳಾದರೂ ನನ್ನ ಹೆಜ್ಜೆಗಳು ನಿಲ್ಲಲಿಲ್ಲ, ಕತ್ತಲೆಯಲಿ ಹೊತ್ತಿದ್ದ ಬೆಳಕೇ ನನ್ನ ಸ್ವಪ್ನದ ದೀಪವಾಯಿತು. ಗಾಳಿ ಕೂಗಲಿ, ಮಳೆ ಸುರಿಯಲಿ ನನ್ನ ಗುರಿಯ ದಾರಿ ತಿರುಗಲಿಲ್ಲ, ನಂಬಿಕೆಯನ್ನು ಕೈಬಿಡದ ಹೃದಯ— ಸಾಧನೆಯ ಹೆಜ್ಜೆಗೆ ನೆರಳಾಯಿತು. ನಾನು ಸೋಲಲಿಲ್ಲ, ನಿಂತುಕೊಳ್ಳಲಿಲ್ಲ, ಪ್ರಯತ್ನವೇ ನನ್ನ ಶಕ್ತಿ, ಪರಿಶ್ರಮವೇ ನನ್ನ ಗೆಲುವು— ಇದು ನನ್ನ ಪಯಣದ ಅಕ್ಷರ ಸತ್ಯ.
----------------------------------
ನೋಂದಣಿ ಐಡಿ : KPFS2-2014