ಅವ್ವ
ರಚನೆ : ವಿಘ್ನೇಶ್ ಆರ್.ಕೆ
----------------------------------
ಜಗದ ಸೃಷ್ಟಿಕರ್ತನು ಆ ಬ್ರಹ್ಮ ಆದರೆ ಅವನ ಸೃಷ್ಟಿಸಿದ್ದು ಅವನಮ್ಮ ತನ್ನ ಪ್ರಾಣ ಲೆಕ್ಕಿಸದೆ ಜನ್ಮ ನೀಡುವಳು ಅಮ್ಮ ನಿನಗೆ ಚಪ್ಪಲಿಯಾದರೂ ಋಣ ತೀರದು ನನ್ನ ಚರ್ಮ ಬಾಲ್ಯದಲ್ಲಿ ತಿನ್ನಿಸುವಳು ಹಣ್ಣು ಕಾಯಿ ಸಂಕಷ್ಟದಿ ಕಣ್ಣೀರ ಒರೆಸೋ ದೇವಿ ಸ್ವಾರ್ಥದ ಈ ಪ್ರಪಂಚದಲ್ಲಿನ ಏಕೈಕ ತ್ಯಾಗಮಯಿ ಅವ್ವ ಅನ್ನೋ ಪದ ಜಗದಲ್ಲಿ ಸದಾ ಚಿರಂಜೀವಿ ಕೇಳಿಕೊಂಡರೆ ಮಾತ್ರ ನೀಡುವ ಆ ದೇವ ಕೇಳದಿದ್ದರೂ ಅರಿತು ನೀಡುವಳು ಅವ್ವ ಇನ್ನಾದರೂ ಅರಿತುಕೊ ಎಲಮಾನವ ತಾಯಿಯೇ ನಿಜವಾದ ದೈವ ಅದೊಂದೇ ಜಗದಲ್ಲಿ ನಿಸ್ವಾರ್ಥ ಜೀವ ಅವ್ವ ನೀ ನಿಜವಾದ ದೈವ
----------------------------------
ನೋಂದಣಿ ಐಡಿ : KPFS2-9975