Submission 6908

ಅಂತೆ ಕಂತೆಗಳ ಸಂತೆಯಲಿ ಸಂತ!

ರಚನೆ : ಸುಬ್ರಹ್ಮಣ್ಯ ಎಮ್.ಕೆ

----------------------------------

ಹೌದು ನಾ ಕಪಟಿಯಂತೆ ಕಳ್ಳಕಾಕರಿಗೆ ಹೌದು ನಾ ಸುಳ್ಳನಂತೆ ನಯವಂಚಕರಿಗೆ ಹೌದು ನಾ ಬಲಹೀನನಂತೆ ಕುತಂತ್ರಿಗಳಿಗೆ ಹೌದು ನಾ ಧೈರ್ಯಹೀನನಂತೆ ಉತ್ತರ ಕುಮಾರರಿಗೆ! ಹೌದು ನಾ ಬುದ್ದಿವಂತನಂತೆ ಸಮಯಸಾಧಕರಿಗೆ ಹೌದು ನಾ ಕಿಲಾಡಿಯಂತೆ ಬಣ್ಣ ಬದಲಿಸುವರಿಗೆ ಹೌದು ನಾ ಕಠೋರನಂತೆ ಕರುಣೆ ಇಲ್ಲದವರಿಗೆ ಹೌದು ನಾ ವಿಚಿತ್ರ ವ್ಯಕ್ತಿಯಂತೆ ವ್ಯಕ್ತಿತ್ವ ಮರೆತವರಿಗೆ! ಹೌದು ನಾ ನಾಚಿಕೆ ಇಲ್ಲದವನಂತೆ ಮೂರು ಬಿಟ್ಟವರಿಗೆ! ಹೌದು ನಾ ಅಪಾಯಕಾರಿಯಂತೆ ಅಪಮಾನ ಮಾಡುವರಿಗೆ ಇಷ್ಟೆಲ್ಲ ಅಂತೆ ಕಂತೆಗಳ ಸಂತೆಯಲ್ಲಿ ಸರಬರಾಜು ಆಗದ ಸರ್ವ ಶ್ರೇಷ್ಠ ಸ್ವಾಭಿಮಾನದ ಸಂಕೇತವೇ ಸಾಧನೆಯ ಶಿಖರ!

----------------------------------

ನೋಂದಣಿ ಐಡಿ : KPFS2-9973

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top